ಹೂವಿನಹಡಗಲಿ, ಮಾ.11- ತಾಲ್ಲೂಕಿನ ಮೈಲಾರ ಗ್ರಾಮದ ಸಮುದಾಯ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯ್ತಿ ಮತ್ತು ಸಂಜೀವಿನಿ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಮಹಿಳಾ ಸ್ನೇಹಿ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ವೀರಮ್ಮ ಮಾತನಾಡಿ, ಮಹಿಳೆ ಸಂಸಾರವನ್ನು ಮುನ್ನಡೆಸಿಕೊಂಡು ಹೋಗುತ್ತಾಳೆಯೇ ವಿನಃ ಪಲಾಯನ ಮಾಡುವುದಿಲ್ಲ. ತನ್ನ ಕುಟುಂಬದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಾಳೆ ಎಂದು ತಿಳಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಕೆ. ಸರಸ್ವತಿ ಕಾರ್ಯಕ್ರಮ ಉದ್ಘಾಟಿಸಿದರು. ವಾಣಿಶ್ರೀ ಒಡೆಯರ್, ಅಂಗನವಾಡಿ ಕಾರ್ಯಕರ್ತೆ ಜಾನಮ್ಮ ಮಾತನಾಡಿದರು. ಮಾಗಳದ ಯಶಸ್ವಿ ಉದ್ಯಮಿ ಲಕ್ಷ್ಮೀ ಮಲ್ಲಾರೆಡ್ಡಿ ಅವರನ್ನು ಸತ್ಕರಿಸಲಾಯಿತು.
ಸದಸ್ಯರಾದ ಜಿ. ರೇಖಾ, ಎಚ್. ಪಾರ್ವತಿ, ನೀಲಮ್ಮ, ಗೌರಮ್ಮ ಒಡೆಯರ್, ಒಕ್ಕೂಟದ ವನಜಾಕ್ಷಮ್ಮ, ಕಾರ್ಯದರ್ಶಿ ಎನ್. ಮಂಜುಳ, ಎನ್. ಲಕ್ಷ್ಮಿಬಾಯಿ, ಗಾಜಿ ರತ್ನಮ್ಮ ಸೇರಿದಂತೆ, ವಿವಿಧ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದರು ಎಂದು ಪಿಡಿಒ ಹೆಚ್. ನಿಂಗಪ್ಪ ತಿಳಿಸಿದ್ದಾರೆ.