ದಾವಣಗೆರೆ, ಜು.26- ವರದಾ ಮತ್ತು ಧರ್ಮ ಈ ಎರಡೂ ನದಿಗಳ ಸಂಗಮ ಸ್ಥಳವಾದ ಹಾನಗಲ್ ತಾಲ್ಲೂಕಿನ ಕೂಡಲ ಗ್ರಾಮವು ಜಲ ಪ್ರವಾಹದಿಂದ ತೊಂದರೆಗೆ ಸಿಲುಕಿಕೊಂಡು ಗ್ರಾಮ ದ್ವೀಪದಂತಾಗಿದೆ. ಶ್ರೀ ಗುರು ಮಹೇಶ್ವರ ಶಿವಾಚಾರ್ಯ ಮತ್ತು ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಭಕ್ತರ ಮನೆಗೆ ತೆಪ್ಪದಲ್ಲಿ ಭೇಟಿ ನೀಡಿ, ಸಾಂತ್ವನ ಹೇಳಿದರು. ಗ್ರಾಮದಲ್ಲಿರುವ ಮಠವೂ ಕೂಡಾ ಪ್ರವಾಹದಿಂದ ತೊಂದರೆಗೀಡಾಗಿದೆ. ಭಕ್ತರ ಮನೆಗಳು ಜಲಾವೃತವಾಗಿವೆ.
February 24, 2025