ದಾವಣಗೆರೆ, ಜು.26 – ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಅಜೀಮ್ ಪ್ರೇಮ್‌ಜೀ ಫೌಂಡೇಷನ್ ಸಹಾಯದಿಂದ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ಕೊರೊನಾ ಸಂಕಷ್ಟದಲ್ಲಿ `ಗರ್ಭಿಣಿಯರಿಗೆ ಪ್ರೋಟೀನ್‌ಯುಕ್ತ ಆಹಾರದ ಕಿಟ್’ಗಳನ್ನು ವಿತರಿಸುವ ಕಾರ್ಯಕ್ರಮವು ಗ್ರಾಮದ ದುರ್ಗಾಂಬಿಕಾ ಸಮುದಾಯ ಭವನದಲ್ಲಿ ಇಂದು ನಡೆಯಿತು.
ಗ್ರಾಮದ ಮುಖಂಡ ಹೆಚ್. ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ
32 ಅಂಗನವಾಡಿ ಕೇಂದ್ರಗಳಿಗೆ ಒಳಪಟ್ಟ ಆಲೂರು, ಆಲೂರುಹಟ್ಟಿ ವೃತ್ತದ ವ್ಯಾಪ್ತಿಯ 246 ಜನ ಗರ್ಭಿಣಿಯರಿಗೆ ಕಿಟ್‌ಗಳನ್ನು ವಿತರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಸಾಗರ್, ಕೊರೊನಾ ಸಂಕಷ್ಟದಲ್ಲಿ ಸಂಸ್ಥೆಯು ಗರ್ಭಿಣಿಯರಿಗಾಗಿ ಆಹಾರ ಕಿಟ್ ವಿತರಿಸುವ ಇಂತಹ 230 ಕಾರ್ಯಕ್ರಮಗಳನ್ನು ಈಗಾಗಲೇ ಮಾಡಿದೆ. ಇದರ ಅಡಿಯಲ್ಲಿ ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ರಕ್ತಪರೀಕ್ಷೆ ಮಾಡಿ ರಕ್ತದ ಗುಂಪುಗಳನ್ನು ತಿಳಿಸುವಂತಹ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಗ್ರಾಮದ ಮುಖಂಡರುಗಳಾದ ಬಿ. ಕರಿಬಸಪ್ಪ, ಬಿ.ಜಿ. ಸಂಗನಗೌಡ್ರು, ಬಿ. ವಿರೂ ಪಾಕ್ಷಪ್ಪ ಮಾತನಾಡಿದರು. ಗ್ರಾಮದ ಮುಖಂಡ ಎನ್. ಬಸವರಾಜಪ್ಪ, ತಾಲ್ಲೂಕು ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ, ಹಳ್ಳಿಕೇರಿ ರಾಜಪ್ಪ, ಎ.ಕೆ. ನಾಗೇಂದ್ರಪ್ಪ, ಎ.ಕೆ. ಬಸಪ್ಪ, ನಾಗರಕಟ್ಟೆ ಬಸಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಎನ್.ವಿ. ವಸಂತರಾಜು, ಪೃಥ್ವಿರಾಜ ಬಾದಾಮಿ, ನಾಗರಾಜ ಕೆ.ಕೆ., ಮೋಹನ್‍ಕುಮಾರ್, ಟಿ. ಕರಿಬಸಪ್ಪ, ಉಪ ಸಮಿತಿಯ ಸದಸ್ಯರುಗಳಾದ ಎನ್.ಕೆ. ಕೊಟ್ರೇಶ್, ಮಧುಕೇಶ್ವರ, ಜಗನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉಸ್ತುವಾರಿಯನ್ನು ಗ್ರಾಮ ದ ಮುಖಂಡ ಎಲಿಗಾರ್ ರಮೇಶ್ ವಹಿಸಿದ್ದರು.