ಕರ್ನಾಟಕ ಅರೇಕಾ ಛೇಂಬರ್ ಆಫ್ ಕಾಮರ್ಸ್‌ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್

ದಾವಣಗೆರೆ, ಜು.23- ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಮೊನ್ನೆ ನಡೆದ ಕರ್ನಾಟಕ ಅರೇಕಾ ಛೇಂಬರ್ ಆಫ್ ಕಾಮರ್ಸ್‌ನ ಪದಾಧಿಕಾರಿಗಳ ಸಭೆಯಲ್ಲಿ ಛೇಂಬರ್‌ನ  ಅಧ್ಯಕ್ಷರಾಗಿ ಜಿ.ಎಂ. ಪ್ರಸನ್ನಕುಮಾರ್ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು. 

ಛೇಂಬರ್ ನ ನಿಕಟಪೂರ್ವ ಅಧ್ಯಕ್ಷ ಆರ್.ಎಸ್. ಹೆಗಡೆ ಹರಿಗಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು. 

ಇದೇ ವೇಳೆ ಉಪಾಧ್ಯಕ್ಷರಾಗಿ ಶಿವಮೊಗ್ಗದ ಮಾದೇಶ ಹೆಗಡೆ, ಯಲ್ಲಾಪುರದ ಮಾರುತಿ ಶಿವರಾಂ ಗಟ್ಟಿ, ಸಾಗರದ ಅಶ್ವಿನ್ ಕುಮಾರ್, ಕೋ ಶಾಧ್ಯಕ್ಷರಾಗಿ ಭೀಮಸ ಮುದ್ರದ ಸಿ. ಶಂಕರ ಮೂರ್ತಿ, ಕಾರ್ಯದರ್ಶಿ ಯಾಗಿ ಪಟೇಲ್ ಶಿವಕು ಮಾರ್, ಸಹ ಕಾರ್ಯ ದರ್ಶಿಯಾಗಿ ಟಿ.ಜಿ. ಮಲ್ಲಿ ಕಾರ್ಜುನ ನೂತನ ಜವಾ ಬ್ದಾರಿ ವಹಿಸಿಕೊಂಡರು.

ಯು.ಆರ್‌.ಡಿ ಖರೀದಿ, ಜಿಎಸ್‌ಟಿ ತೆರಿಗೆ, ಆದಾಯ ತೆರಿಗೆಗಳಲ್ಲಾದ ಬದಲಾವಣೆಗಳು, ಖಾಸಗಿ ವರ್ತಕರು ಮತ್ತು ಸಹಕಾರಿ ಸಂಘಗಳ ವ್ಯವಹಾರದ ತಾರತಮ್ಯ ಸೇರಿದಂತೆ ಅಡಿಕೆ ವ್ಯಾಪಾರದಲ್ಲಿನ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಬರುವ ದಿನಗಳಲ್ಲಿ ಅಡಿಕೆ ಮಾರುಕಟ್ಟೆಗೆ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಣೆ ಮಾಡುತ್ತೇವೆ ಮತ್ತು ಸಹಕರಿಸುವುದಾಗಿ ತಿಳಿಸಿದರು.

ಛೇಂಬರ್‌ನ ಮಾಜಿ ಅಧ್ಯಕ್ಷ ಓಂಕಾರಪ್ಪ, ಶಿವಮೊಗ್ಗದ ಡಿ. ಶಂಕರಪ್ಪ ಇದ್ದರು. ಛೇಂಬರ್‌ನ ಮಾಜಿ ಕಾರ್ಯದರ್ಶಿ ಆರ್.ಎಂ. ಪಾಟೀಲ್ ವರದಿ ಮಂಡಿಸಿದರು.

error: Content is protected !!