ಜಗಳೂರು, ಮಾ.5 – ದೇಶದ ವಿವಿಧೆಡೆ ವಕೀಲರ ಮೇಲಿನ ಹಲ್ಲೆ ಹಾಗೂ ಹತ್ಯೆಗಳನ್ನು ಖಂಡಿಸಿ ತಾಲ್ಲೂಕು ನ್ಯಾಯವಾದಿಗಳ ಸಂಘದಿಂದ ಇಂದು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿದ ವಕೀಲರು ಸರ್ಕಾರದ ವಿರುದ್ದ ಘೋಷಣೆ ಕೂಗಿ ನಂತರ ತಹಶೀಲ್ದಾರ್ ಡಾ.ನಾಗವೇಣಿ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಬಸವರಾಜ್ ಮಾತನಾಡಿ, ವಕೀಲರುಗಳಿಗೆ ಸಂವಿಧಾನದಡಿ ಜೀವ, ಮಾನ, ಆಸ್ತಿಗಳ ರಕ್ಷಣೆ ಮಾಡುವ ಸಂಬಂಧ ನೂತನ ಶಾಸನ, ನಿಯಮಾವಳಿಗಳನ್ನು ಮತ್ತು ಪ್ರಕರಣಗಳ ಗಂಭೀರತೆಯನ್ನು ಆಧರಿಸಿ ಪರಿಹಾರ ನೀಡಬೇಕು ಹಾಗೂ ವಕೀಲರುಗಳಿಗೆ ಸೂಕ್ತ ರಕ್ಷಣೆಗೆ ಶಾಸನ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಯುವ ವಕೀಲ ಡಿ.ಶ್ರೀನಿವಾಸ್ ಮಾತನಾಡಿ, ತೆಲಂಗಾಣ ರಾಜ್ಯದ ವಕೀಲ ದಂಪತಿಗಳಾದ ಗಟ್ಟುವಾಮನ ರಾವ್ ಮತ್ತು ಶ್ರೀಮತಿ ಪಿ.ಬಿ ನಾಗವೇಣಿ ಅವರನ್ನು ಫೆ.17 ರಂದು ಕೋರ್ಟ್ ನಿಂದ ಕಲಾಪ ಮುಗಿಸಿ ಬರುವಾಗ ನಡುರಸ್ತೆಯಲ್ಲಿಯೇ ಹತ್ಯೆಗೈಯ್ಯಲಾಗಿದೆ.
ಹಾಗೂ ವಿಜಯನಗರ ಜಿಲ್ಲೆ ಹೊಸಪೇಟೆ ಕೋರ್ಟ್ ಆವರಣದಲ್ಲಿ ಕುಳಿತಿರುವಾಗ ಹಾಡುಹಗಲೇ ಬರ್ಬರ ಹತ್ಯೆಗೈದಿದ್ದಾರೆ. ಇದು ಖಂಡನೀಯ ಎಂದರು.
ಇದೇ ರೀತಿ ಕಕ್ಷಿದಾರರು ವಕೀಲರ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆ, ಮಾನಸಿಕ ಹಿಂಸೆ, ದುರ್ವರ್ತನೆ, ವೃತ್ತಿಗೆ ಅಗೌರವ ತೋರಿಸಿ ವಕೀಲರ ಮೇಲೆ ಶೋಷಣೆ ನಡೆದಿವೆ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್ .ಹಾಲಪ್ಪ, ವಕೀಲರ ಸಂಘದ ಪದಾಧಿಕಾರಿಗಳಾದ ತಾರೇಹಳ್ಳಿ ವೆಂಕಟೇಶ್, ಪಲ್ಲಾಗಟ್ಟೆ ವೀರಣ್ಣ, ಇ.ಓಂಕಾರೇಶ್ವರ, ಎಚ್. ಕರಿಬಸಪ್ಪ, ರುದ್ರೇಶ್, ಸೊಕ್ಕೆ ಪ್ರಕಾಶ್, ಮರೇನಹಳ್ಳಿ ಟಿ. ಬಸವರಾಜ್, ಬಿ.ಓಂಕಾರಪ್ಪ, ಸಣ್ಣ ಓಬಯ್ಯ, ಬೋರಯ್ಯ, ರೂಪ, ಸಣ್ಣ ಓಬಯ್ಯ, ತಿಪ್ಪೇಸ್ವಾಮಿ, ನಾಗೇಶ್, ಮಹಾಂತೇಶ್, ಗೌಡಗೊಂಡನಹಳ್ಳಿ ಬಸವರಾಜ್ ಹಾಗೂ ತಾ.ಪಂ. ಸದಸ್ಯ ತಿಮ್ಮೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.