ಹರಪನಹಳ್ಳಿ: 2ಎ ಮೀಸಲಾತಿಗಾಗಿ ಒತ್ತಾಯ

ಹರಪನಹಳ್ಳಿ, ಮಾ.4- ವೀರಶೈವ ಲಿಂಗಾಯತ ಪಂಚಮಸಾಲಿ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ 2ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ  ನೀಡುವಂತೆ ಒತ್ತಾಯಿಸಿ ತಾಲ್ಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ 2ಎ ಮೀಸಲಾತಿ ಸಮಿತಿ  ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ಪೂಜಾರ್ ಮಾತನಾಡಿ,  ರಾಜ್ಯ ದಲ್ಲಿರುವ ವೀರಶೈವ ಲಿಂಗಾಯತ ಒಳ ಪಂಗಡಗಳಲ್ಲಿ ಪಂಚಮಸಾಲಿ ಜನಾಂಗ ಶೇ. 90 ರಷ್ಟು ಇದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿ ಕವಾಗಿ ಅತ್ಯಂತ ಹಿಂದುಳಿದಿದ್ದೇವೆ ಎಂದರು.

ಪ್ರಚಾರ ಸಮಿತಿ ಕಾರ್ಯದರ್ಶಿ ಅಡವಿಹಳ್ಳಿ ಬಸವರಾಜ್ ಮಾತನಾಡಿ,  ಪಂಚಮಸಾಲಿ ಸಮಾಜದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕೂಡಲ ಸಂಗಮದಿಂದ ವಿಧಾನಸೌಧದವರೆಗೆ ಪಾದಯಾತ್ರೆ ಮಾಡಿ, ರಾಜಧಾನಿಯಲ್ಲಿ  ಪಂಚಮಸಾಲಿ ಬೃಹತ್
ರಾಲಿ ಸಂಘಟಿಸಿ  ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಿ ದರೂ ನಮ್ಮ ಮನವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.

ಎಂ. ಪರಮೇಶ್ವರಪ್ಪ, ತಿಮ್ಲಾಪುರ ನಾಗರಾಜ, ಕುಂಚೂರು ಎ. ವೀರಣ್ಣ, ಬೇಲೂರು ಅಂಜಪ್ಪ, ನೀಲಗುಂದ ಸಿದ್ದಲಿಂಗಪ್ಪ, ಬೋರ್‌ವೆಲ್ ಶರಬಣ್ಣ, ಎಚ್. ಅಶೋಕ, ಗುಂಡಗತ್ತಿ ಮಹೇಶಪ್ಪ, ಅರಸೀಕೆರೆ ಷಣ್ಮುಖಪ್ಪ, ಕೆಂಪನಗೌಡ, ಚಿಗಟೇರಿ ಗಾಯತ್ರಮ್ಮ ಹಾಗೂ ಮತ್ತಿತರರಿದ್ದರು.

error: Content is protected !!