ವಂಚನೆ ಪ್ರಕರಣ: ಕೋಳಿ ಸಾಕಾಣಿಕೆದಾರರ ಮನವಿ

ದಾವಣಗೆರೆ, ಮಾ.4 – ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಕಂಪನಿಗೆ ಜಗಳೂರು ತಾಲ್ಲೂಕಿನ ಗೋಗುದ್ದು ಗ್ರಾಮದವರಾದ ನಿಜಾಮುದ್ದೀನ್ ಮತ್ತವರ ಸಹೋದರ ತಾಜುದ್ದೀನ್ ಎಂಬುವವರು ನಿಯಮಾವಳಿ ಪ್ರಕಾರ ಕೋಳಿಗಳನ್ನು ನೀಡದೆ ಬೇರೆಯವರಿಗೆ ಮಾರಾಟ ಮಾಡಿ ಕಂಪನಿಗೆ ದ್ರೋಹ ಬಗೆದಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋಳಿ ಸಾಕಾಣಿಕೆದಾರರ ಸಂಘವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದೆ.

ಇದೇ ವೇಳೆ ಮಾತನಾಡಿರುವ ಸಂಘದ ಗೌರವಾಧ್ಯಕ್ಷ ಬಿ.ಜಿ. ಸಂಗನಗೌಡ್ರು, ಕಳೆದ 15 ವರ್ಷಗಳಿಂದ ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಕಂಪನಿಯ ಇಂಟಿಗ್ರೇಷನ್ ವ್ಯವಸ್ಥೆಯ ರೈತರಾಗಿರುವ ನಾವುಗಳು, ಕಂಪನಿ ಕೋಳಿ ಮರಿಗಳನ್ನು ಬೆಳೆಸಲು ಆಹಾರ, ಔಷಧೋಪಚಾರ ಮಾಡುತ್ತಿದೆ. ನಾವುಗಳು ಕೋಳಿಗಳನ್ನು ಸರಿಯಾಗಿ ಪಾಲಿಸಿ, ಬೆಳೆಸಿ ಸರಿಯಾದ ತೂಕ ಬಂದ ನಂತರ ಕಂಪನಿ ನಿಗದಿಪಡಿಸಿದ ಮಾರಾಟಗಾರರಿಗೆ ಕೊಡುವುದು ನಮ್ಮ ಕರ್ತವ್ಯವಾಗಿದ್ದು, ಈಗ ಜಗಳೂರಿನ ಈ ಪ್ರಕರಣದಿಂದಾಗಿ ಕಂಪನಿಯವರು ಈ ವ್ಯವಸ್ಥೆಯನ್ನು ಸಂಶಯ ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಂಪನಿಯನ್ನೇ ನಂಬಿಕೊಂಡು ಫಾರಂ ನಿರ್ಮಾಣಕ್ಕೆ ಸಾಲದ ರೂಪದಲ್ಲಿ ಲಕ್ಷಾಂತರ ರೂ., ಬಂಡವಾಳ ಹಾಕಿರುವವರ ಸ್ಥಿತಿ ಶೋಚ ನೀಯ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ದುರ್ಬಲಗೊಳಿಸುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಂಡು ಕಂಪನಿ ಮತ್ತು ರೈತರ ಸಂಬಂಧ ಗಟ್ಟಿಗೊಳಿಸಿ ಜೀವನಕ್ಕೆ ಅನುಕೂಲ ಮಾಡಿಕೊಡಬೇಕೆಂದು ಎಸ್ಪಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಂಜಪ್ಪ, ಎಸ್.ಆರ್. ಪಾಟೀಲ್, ಮಂಜು ಎಂ., ನಿಂಗಪ್ಪ ಕರೂರ, ಲಕ್ಷ್ಮೀಕಾಂತ್, ನಾಗರಾಜ, ಪುಂಡಲೀಕ ದಾಸರ, ಪರಮೇಶಿ, ಮಲ್ಲಿಕಾರ್ಜುನ, ನಾಗರಾಜ ಎಸ್. ಮದಿನಾಯ್ಕರ್, ಸುಭಾಷ್, ಬಸಣ್ಣ, ಜಯದೇವ ಪೂಜಾರ್, ಗಿರೀಶ್ ಎಂ. ಐರಣಿ, ಮಂಜಪ್ಪ ಪೂಜಾರ್ ಮತ್ತಿತರರು ಹಾಜರಿದ್ದರು.

error: Content is protected !!