ದಾವಣಗೆರೆ, ಜು.21- ಅಖಿಲ ಭಾರತ ಜಂಗಮ ಮಹಾ ಸಭಾದ ಮಾಸಿಕ ಸಭೆಯು ನಗರದ ಶ್ರೀ ಡಾ. ಸದ್ಯೋಜಾತ ಶಿವಾಚಾರ್ಯರ ಹಿರೇಮಠದಲ್ಲಿ ಮೊನ್ನೆ ನಡೆಯಿತು.
ಸಮಾಜದ ಮುಂದಿನ ಆಗು-ಹೋಗುಗಳ ಬಗ್ಗೆ ಚರ್ಚೆ ಮಾಡಿ, ಸರ್ಕಾರದ ವತಿಯಿಂದ ಬೇಡ ಜಂಗಮರಿಗೆ ಸಿಗುವಂತಹ ಸೌಲಭ್ಯ ಮತ್ತು ಅನುದಾನಗಳನ್ನು ಸಮಾಜದ ಜನರಿಗೆ ದೊರಕಿಸಿಕೊಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಮಾಜದ ವತಿಯಿಂದ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ವಿಚಾರ ವಿನಿಮಯ ಮಾಡಲಾಯಿತು.
ಅರುಣಕುಮಾರ್ ಜಡಿಮಠ್, ಡಾ. ಹಾಲಸ್ವಾಮಿ ಕಂಬಾಳಿಮಠ್, ಉಳುವಯ್ಯ, ಶಶಿಕಲಾ, ಚಂದ್ರಕಲಾ, ವಕೀಲರಾದ ಶ್ರೀಮತಿ ವಸುಂಧರಾ, ಸಂತೋಷ್, ಗಂಗಾಧರಾಯ ಹಿರೇಮಠ್, ಶಾಂತಯ್ಯ ಪರಡಿ ಮಠ, ದಾಕ್ಷಾಯಣಮ್ಮ ಮತ್ತು ಇತರರು ಚರ್ಚೆಯಲ್ಲಿ ಭಾಗವಹಿಸಿದ್ದರು.