ಗುರುವಂದನಾ ಕಾರ್ಯಕ್ರಮದಲ್ಲಿ ಹೆಚ್.ಬಿ. ಕರಿಬಸಮ್ಮ
ದಾವಣಗೆರೆ, ಮಾ. 4- ಶಿಕ್ಷಣ ನೀಡುವ ಗುರುಗಳೇ ವಿದ್ಯಾರ್ಥಿಗಳಿಗೆ ಸರ್ಕಾರದ ಶಿಕ್ಷಣ ಸುಧಾರಣಾ ನೀತಿಯಿಂದಾಗಿ ಹೆದರಿ ಪಾಠ ಹೇಳಿಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಯಾಮರಣ ಕಾನೂನು ಜಾರಿಗೆ ಶ್ರಮಿಸಿದ ಹೋರಾಟಗಾರ್ತಿ ಮತ್ತು ಹೊಂಡದ ರಸ್ತೆ ಶಾಲೆಯ ವಿಶ್ರಾಂತ ಶಿಕ್ಷಕಿ ಹೆಚ್.ಬಿ. ಕರಿಬಸಮ್ಮ ಖೇದ ವ್ಯಕ್ತಪಡಿಸಿದರು.
ಇತ್ತೀಚೆಗೆ ನಗರದ ರೋಟರಿ ಕ್ಲಬ್ನಲ್ಲಿ ನಡೆದ ಹೊಂಡದ ರಸ್ತೆ ಶಾಲೆಯ 1987-88ನೇ ಸಾಲಿನ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬದಲಾವಣೆ ಜಗದ ನಿಯಮ ಎಂಬಂತೆ ನೋಟಿ ನಲ್ಲಿ ಕೂಡ ಭಾರತಮಾತೆಯ ಚಿತ್ರವನ್ನು ಮುದ್ರಿಸ ಬೇಕೆಂದು ಹೋರಾಟ ಮಾಡುತ್ತಿ ರುವ ಅವರು, ಸಹಿ ಸಂಗ್ರಹಿಸ ಬೇಕೆಂದು ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ, ಕುಟುಂ ಬದ ಸದಸ್ಯರಿಗೂ ಮನವಿ ಮಾಡಿದರು.
ನಿವೃತ್ತ ಮುಖ್ಯೋಪಾಧ್ಯಾಯಿನಿಯವರಾದ ಆರ್. ನಾಗರತ್ನಮ್ಮ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಿವೃತ್ತ ಶಿಕ್ಷಕಿ ಸಿ.ಎಚ್. ಹಂಪಕ್ಕ, ಸನ್ಮಾನಿತ ನಿವೃತ್ತ ಶಿಕ್ಷಕಿ ಇ.ಕೆ. ಗಿರಿಜಾಂಬ ಈ ಸಂದರ್ಭದಲ್ಲಿ ಮಾತನಾಡಿದರು.
ನಳಿನಾ ಪ್ರಾರ್ಥಿಸಿದರು. ಕೆ.ಜೆ. ದಾನೇಶ್ ಸ್ವಾಗತಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಸಿ. ಶ್ರೀಪಾದ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕರಿಬಸಪ್ಪ, ರಾಜು, ಪರಶುರಾಂ, ಕರಿಬಸಮ್ಮ, ನಾಗರಾಜ ಜಿ. ಬಸವರಾಜ ಎನ್. ಹಾಗು ಇನ್ನಿತರರು ಇದ್ದರು.