ಭಾರತದ ಸಂಸ್ಕೃತಿ ಉಳಿದಿರುವುದೇ ಕಲೆಗಳಿಂದ

ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಲೀಲಾಜಿ

ದಾವಣಗೆರೆ, ಫೆ. 27- ಅನೇಕ ಪರಕೀಯರ ದಾಳಿಗೆ ಒಳಗಾಗಿದ್ದರೂ ಸಹ ನಮ್ಮ ಭಾರತ ದೇಶದ ಭವ್ಯವಾದ ಸಂಸ್ಕೃತಿ ಇಂದಿಗೂ ಸುಭದ್ರವಾಗಿ ಉಳಿದಿದೆ ಹಾಗೂ ಈಗಲೂ ಬೆಳೆಯುತ್ತಿದೆ ಎಂದರೆ ಅದು ನಮ್ಮ ಕಲೆಗಳಿಂದ ಮತ್ತು ಕಲಾವಿದರಿಂದ.  ದೇವತಾ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶ ತಪಸ್ವಿಗಳು ಹಾಗೂ ಮಹಾತ್ಮರು ತಪಸ್ಸನ್ನು ಮಾಡಿದ ಪವಿತ್ರವಾದ ತಪೋ ಭೂಮಿ ಎಂದು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಲೀಲಾಜಿ ತಿಳಿಸಿದರು.

ಅವರು ನಗರದ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆಯ ಆವರಣದಲ್ಲಿ ನಡೆದ ಯಕ್ಷ ಸೌರಭ ಯಕ್ಷಗಾನ ಕಲಿಕಾ ಕೇಂದ್ರದ 3 ನೇ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಯಕ್ಷಗಾನ  ಕಲೆಯೂ ಕೂಡ ದೈವೀ ಆರಾಧನಾ ಕಲೆಯಾಗಿದ್ದು, ನಮ್ಮ ದೇಶದ ಸಂಸ್ಕೃತಿಯ ಹಿರಿಮೆ, ಗರಿಮೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇಂತಹ ಶ್ರೇಷ್ಠವಾದ ಕಲೆಯನ್ನು ದಾವಣಗೆರೆಯಲ್ಲಿ ಬೆಳೆಸುತ್ತಿರುವ ಯಕ್ಷಸೌರಭ ಯಕ್ಷಗಾನ ತರಬೇತಿ ಕೇಂದ್ರ ಪುಣ್ಯದ ಕೆಲಸ ಮಾಡುತ್ತಿದೆ ಎಂದು

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಅವರು ಮಾತನಾಡಿ, ದಾವಣಗೆರೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ ಯಕ್ಷಗಾನವನ್ನು ಕಲಿಸುತ್ತಿರುವ ಯಕ್ಷ ಸೌರಭ ಯಕ್ಷಗಾನ ಕಲಿಕಾ ಕೇಂದ್ರವು ನಮ್ಮ ದೇಶದ ಅತ್ಯಂತ ಪುರಾತನವಾದ ಕಲೆಯನ್ನು ಕಲಿಸುವ ಪುಣ್ಯದ ಕೆಲಸವನ್ನು ಮಾಡುತ್ತಿದೆ. ಕಲಿಕೆ ಎನ್ನುವುದು ನಿರಂತರವಾದ ಪ್ರಕ್ರಿಯೆ. ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಕಲಿಕಾ ಗುರುಗಳಿಗೂ ಇದು ಕಲಿಕಾ ಕೇಂದ್ರವಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ  ಹೆಚ್ಚು ಹೆಚ್ಚು ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರ ನೀಡಲಿದೆ
ಎಂದರು‌.  

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪೊಲೀಸ್ ಅಧಿಕಾರಿ ಯು. ನಾಗೇಶ್ ಐತಾಳ್, ಸಮಾಜ ಸೇವಕರು ಹಾಗೂ ಬಿ.ಜೆ.ಪಿ. ಯುವ ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ‌, ಉದ್ಯಮಿ ಹಾಗೂ ಕಲಾ ಪೋಷಕರಾದ ವಾಸುದೇವ ರಾಯ್ಕರ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಎಂ.ಕೆ.ಬಕ್ಕಪ್ಪ, ಯಕ್ಷ ಸೌರಭ ಸಂಸ್ಥೆಯ ಅಧ್ಯಕ್ಷರಾದ ಸಕ್ಕಟ್ಟು ರಾಜಶೇಖರ್, ಯಕ್ಷ ಸೌರಭ ಯಕ್ಷಗಾನ ಕಲಿಕಾ ಕೇಂದ್ರದ ಸಂಸ್ಥಾಪಕರು ಮತ್ತು ಯಕ್ಷ ಗುರುಗಳಾದ ಕರ್ಜೆ ಸೀತಾರಾಮ ಆಚಾರ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಕೆನರಾ ಬ್ಯಾಂಕ್ ಉದ್ಯೋಗಿ ಹಾಗೂ ಯಕ್ಷಗಾನ ತರಬೇತುದಾರ ಕೆ‌.ರಾಘವೇಂದ್ರ ನಾಯರಿ, ಯಕ್ಷ ಸೌರಭದ ಪದಾಧಿಕಾರಿಗಳಾದ ರಾಘವೇಂದ್ರ ಪಿ. ಶೇಟ್, ಅನಿತಾ ಡಿ. ಭಾಸ್ಕರ್, ಮಾಲತೇಶ್ ನಾಡಿಗೇರ್, ಲತಾ ವಾದಿರಾಜ್, ಸೌಮ್ಯ ಸತೀಶ್‌, ಅಮೂಲ್ಯ ಸಿ,  ವಿದ್ಯಾಲತಾ, ಲತಾ ರವಿ  ಕಬ್ಬನೂರು, ಶ್ರೀನಿವಾಸ ಉಪಾಧ್ಯ, ಉದಯ್ ಶೇರಿಗಾರ್, ರಾಗಿಣಿ ನಾಡಿಗೇರ್, ಗಂಗಾ, ಸಿಂಧು, ಇಂಪನ, ಚಿತ್ರಾ ಮುಂತಾದವರು ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಯಕ್ಷ ಸೌರಭ ಸಂಸ್ಥೆಯ ಸಂಸ್ಥಾಪಕರಾದ ಯಕ್ಷ ಗುರು ಕರ್ಜೆ ಸೀತಾರಾಮ ಆಚಾರ್ಯರಿಗೆ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಗಣ್ಯರಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು. 

ಯಕ್ಷ ಸೌರಭದ ಸದಸ್ಯರು ಪ್ರಾರ್ಥಿಸಿದರು.  ಶ್ರೀಮತಿ ಶ್ರೀ ರಾಗಿಣಿ ಮಾಲತೇಶ ಸ್ವಾಗತಿಸಿದರು. ಉಪನ್ಯಾಸಕಿ ಸುಮತಿ ಜಯಪ್ಪ ಅವರು  ಕಾರ್ಯಕ್ರಮ ನಿರೂಪಿಸಿದರು. 

ಸಭಾ ಕಾರ್ಯಕ್ರಮದ ತರುವಾಯ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು “ಮಹಿಷ ಮರ್ಧಿನಿ” ಎಂಬ ಪೌರಾಣಿಕ ಕಥಾ ಭಾಗದ ಯಕ್ಷಗಾನ ಪ್ರದರ್ಶನವನ್ನು ನಡೆಸಿಕೊಟ್ಟರು. 

ಯಕ್ಷಗಾನ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಕೋಟ ನವೀನ್, ಮದ್ದಳೆ ವಾದಕರಾಗಿ ಶಿವಪುರ ಗಣೇಶ್ ಶಣೈ, ಚಂಡೆವಾದಕರಾಗಿ ಕನ್ಯಾನ ಭಾಸ್ಕರ ಆಚಾರ್ಯ ಹಾಗೂ ಪಾತ್ರಧಾರಿಗಳಾಗಿ ಕು. ಅಮೂಲ್ಯ, ಕು. ಅನಘ, ಕು. ಧನ್ಯಶ್ರೀ, ಕು. ಹರ್ಷಿತಾ, ಕು. ಮಾನ್ಯಶ್ರೀ, ಕು. ಪ್ರಜ್ಞಾ, ಕು. ಚಿತ್ರಾ, ಕು. ಸಹನಾ ಶೇರಿಗಾರ್,  ಕು. ಅನಿರುದ್ಧ, ಕು. ಭಾರ್ಗವ್, ಕು. ರೋಹಿತ್ ಮತ್ತಿತರರು ನಿರ್ವಹಿಸಿದರು.

error: Content is protected !!