ವಿಜಾನ ವಿದ್ಯಾರ್ಥಿಗಳಿಗೆ ಪ್ರೊ. ಗಾಯತ್ರಿ ಕರೆ
ದಾವಣಗೆರೆ, ಫೆ.27- ವಿಜ್ಞಾನದ ಮಹತ್ವವನ್ನು ಅರಿತುಕೊಳ್ಳುವ ಜೊತೆಗೆ ತಂತ್ರಜಾನದ ಪ್ರಯೋಜನಗಳನ್ನು ಸದ್ಬಳಕೆ ಮಾಡಿಕೊಂಡು ವಿಜಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವತ್ತ ಹೆಚ್ಚು ಒತ್ತು ನೀಡುವಂತೆ ದಾವಣಗೆರೆ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜು ವಿಜಾನ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು, ಇಂದು ನಗರದ ಧ.ರಾ.ಮ ವಿಜಾನ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ವಿಜಾನ ವೇದಿ ಕೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜಾನ ದಿನಾ ಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ದಿನಾಚರಣೆ ಕೇವಲ ವಿಜ್ಞಾನ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ಎಲ್ಲಾ ವಿದ್ಯಾರ್ಥಿಗಳಲ್ಲೂ ವೈಜ್ಞಾನಿಕ ಮನೋಭಾವನೆ ಅಳವಡಿಸಿಕೊಳ್ಳಲು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ ಎಂದರು.
ವಿಜಾನ ಮತ್ತು ತಂತ್ರಜಾನ ಪ್ರಸ್ತುತ ದಿನಮಾನಗಳಲ್ಲಿ ಪ್ರಚಲಿತದಲ್ಲಿದ್ದು, ಹೆಚ್ಚು ಪರಿಣಾಮಕಾರಿಯಾಗಿ ಪ್ರಭಾವ ಬೀರಿವೆ.
ವಿಜಾನ ಮತ್ತು ತಂತ್ರಜಾನ ವನ್ನು ಸದ್ಬಳಕೆ ಮಾಡಿಕೊಂಡರೆ ಸಕಾರಾತ್ಮಕವಾಗಲಿದ್ದು, ದುರ್ಬಳಕೆಯಾದರೆ ನಕಾರಾತ್ಮಕವಾಗಿಯೂ ಪರಿಣಾಮ ಬೀರಲಿದೆ. ಹಾಗಾಗಿ ಅವಕಾಶ, ಪ್ರಯೋಜನಗಳನ್ನು ಸದ್ಬಳಕೆ ಮಾಡಿಕೊಂಡು ವಿಶೇಷ ಸಂಶೋಧನೆ, ಪ್ರಯೋಗಗಳ ಮುಖೇನ ಈ ಕ್ಷೇತ್ರದಲ್ಲಿ ಸಾಧನೆ ಮಾಡಿ ಪ್ರಪಂಚಕ್ಕೇ ಉತ್ತಮ ಕೊಡುಗೆ ನೀಡುವಂತೆ ಸಲಹೆ ನೀಡಿದರು.
ಮೊಬೈಲ್ ಬಳಕೆಗೆ ಹೆಚ್ಚು ಪ್ರಾಮುಖ್ಯತೆ ನೀಡದೇ, ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೆ ಪೂರಕವಾಗಿ ಅವಶ್ಯಕತೆ ಅನುಗುಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಮೊಬೈಲ್ ಬಳಕೆಯನ್ನೇ ಜೀವನವಾಗಿಸಿಕೊಳ್ಳದೇ ಜೀವನದಲ್ಲಿ ಉತ್ತಮ ಗುರಿ ಸಾಧನೆಯತ್ತ ಮುಂದಾಗಬೇಕು. ದಿನಚರಿಯ ವೇಳಾ ಪಟ್ಟಿ ಅನುಸರಿಸಿ ಶೈಕ್ಷಣಿಕ ಪ್ರಗತಿ ಮತ್ತು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ವನಜಾ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜಾನ ಪ್ರಸಾರ ಮತ್ತು ವೈಜಾನಿಕ ಮನೋಭಾವನೆ ಬೆಳೆಸುವುದು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದ ಅವರು, ಸರ್ ಸಿ.ವಿ. ರಾಮನ್ ಅವರನ್ನು ಸ್ಮರಿಸುತ್ತಾ, ದೇಶೀಯ ವಿಜಾನಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ನಮಗೆ ಮಾದರಿಯಾಗಿದೆ. ಅವರ ಸಾಧನೆಯನ್ನು ಮಾರ್ಗದರ್ಶಕವಾಗಿಟ್ಟುಕೊಂಡು ಸಾಧನೆಗೆ ಮುಂದಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ವೇಳೆ ವಿಜಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮಂಗಳಗೌರಿ ಪ್ರಾರ್ಥಿಸಿದರು. ಕಮಲಾ ಸೊಪ್ಪಿನ್ ಸ್ವಾಗತಿಸಿದರು.
ಡಾ. ಟಿ. ವಸಂತ ನಾಯ್ಕ್ ಅತಿಥಿಗಳನ್ನು ಪರಿಚಯಿಸಿದರು. ಎಸ್.ಆರ್. ಕುಮಾರ್ ನಿರೂಪಿಸಿದರು. ಪ್ರಾಂಶುಪಾಲ ಡಾ. ಎಸ್.ಆರ್. ಗೋಪಾಲಕೃಷ್ಣ ನಾಯ್ಕ್ ವಂದಿಸಿದರು.