ದಾವಣಗೆರೆ, ಜು.19- ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನಾಗರಿಕರಿಗೆ ನೀಡುತ್ತಿರುವ ಉಚಿತ ಕೊರೊನಾ ಲಸಿಕಾ ಶಿಬಿರವು ಶ್ರೀ ಕನ್ನಕಾಪರಮೇಶ್ವರಿ ದೇವಸ್ಥಾನ ಸಂಘ, ವಾಸವಿ ಯುವಜನ ಸಂಘದ ಸಹಭಾಗಿತ್ವದಲ್ಲಿ ಶ್ರೀ ಕನ್ನಕಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ನಡೆಯಿತು. ಶಾಸಕ ಶಾಮನೂರು ಶಿವಶಂಕರಪ್ಪ ಅವರು ಲಸಿಕಾ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ್, ಕುರುಡಿ ಗಿರೀಶ್, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ್, ಕಾರ್ಯಾಧ್ಯಕ್ಷ ಕಾಸಲ್ ಸತೀಶ್, ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಅಧ್ಯಕ್ಷ ಆರ್.ಜಿ.ಶ್ರೀನಿವಾಸಮೂರ್ತಿ, ವಾಸವಿ ಯುವಜನ ಸಂಘದ ಆರ್.ಎನ್.ಅಜಿತ್, ಗೌರವಾಧ್ಯಕ್ಷ ಬಿ.ಎಸ್.ಶಿವಾನಂದ, ನಿಕಟ ಪೂರ್ವ ಅಧ್ಯಕ್ಷ ಬಿ.ಎನ್.ಸಾಯಿಪ್ರಸಾದ್, ಕಾರ್ಯದರ್ಶಿ ಜಿ.ಎಸ್.ಸುಬ್ರಹ್ಮಣ್ಯ, ಸಹ ಕಾರ್ಯದರ್ಶಿ ಎಸ್.ಸುನಿಲ್, ಸಮಾಜದ ಮುಖಂಡರುಗಳಾದ ಸತ್ಯನಾರಾಯಣ, ಗುಂಡಾಲ್ ಮಂಜುನಾಥ್, ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಅಶ್ವತ್ಥ್ ರಾಜ್ ಉಪಸ್ಥಿತರಿದ್ದರು.