ವಾಣಿಜ್ಯ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕರೆ
ದಾವಣಗೆರೆ, ಫೆ. 27 – ಕನಸಿಗೆ ಮಿತಿ ಇಲ್ಲ, ಕನಸಿಗೆ ಶುಲ್ಕವಿಲ್ಲ, ಕನಸಿ ಗೆ ಮೀಸಲಾತಿ ಇಲ್ಲ. ಕನಸುಗಳು ಸಾಕಾರಗೊಳ್ಳದೇ ಇರುವುದಿಲ್ಲ. ಹೀಗಾಗಿ ಕನಸು ಕಾಣಲು ಹಿಂಜರಿ ಯಬಾರದು, ದೊಡ್ಡ ಕನಸುಗಳನ್ನೇ ಕಾಣಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ನಗರದ ಬಾಪೂಜಿ ಇನ್‌ಸ್ಟಿ ಟ್ಯೂಟ್ ಆಫ್ ಹೈ – ಟೆಕ್ ಎಜು ಕೇಷನ್ ವತಿಯಿಂದ ಬಿಂಕಾಂ ವಿದ್ಯಾ ರ್ಥಿಗಳಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ವಾಣಿಜ್ಯ ಪ್ರದರ್ಶನ ಕಾ ರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸಣ್ಣ ಕನಸು ಕಾಣುವುದೇ ಅಪರಾಧ. ಕನಸು ಕಾಣುವುದೇ ಆದರೆ ದೊಡ್ಡ ಕನಸು ಕಾಣಬೇಕು. ಈ ಕನಸು ಅಲ್ಲಿಗೇ ಸೀಮಿತವಾಗದೇ ದೃಷ್ಟಿಕೋನವೂ ಆಗಬೇಕು. ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಸಾಮಾನ್ಯ ಜ್ಞಾನವನ್ನೂ ಬೆಳೆಸಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ದೀರೂಭಾಯಿ ಅಂಬಾನಿ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮುಂದೆ ತೈಲ ಕಂಪನಿಯ ಮಾಲೀಕರೇ ಆದರು. ಬೆಳೆಯುವುದು ಹೇಗೆ ಎಂಬ ಬಗ್ಗೆ ಇಂತಹ ಸಾಕಷ್ಟು ಉದಾಹರಣೆಗಳಿವೆ. ನೀವು ವಿದ್ಯಾರ್ಥಿಗಳು ಮುಂದೆ ಬೃಹತ್ ಸಾಧನೆ ಮಾಡಬಹುದು. ವಾಣಿಜ್ಯ ವಿದ್ಯಾರ್ಥಿಗಳಾದ ನೀವು, ಮುಂದೆ ಸರ್ಕಾರಕ್ಕೇ ಸಾಲ ನೀಡುವ ಮಟ್ಟಕ್ಕೆ ಬೆಳೆಯಬಹುದು ಎಂದರು.
ಬೆಳೆಯುವ ಜೊತೆಗೆ ಬೇರೆ ಯವರನ್ನೂ ಬೆಳೆಸಿ. ಖರ್ಜೂರದ ಮರದಂತೆ ಎತ್ತರಕ್ಕೆ ಬೆಳೆದರೆ, ಬೇರೆಯವರಿಗೆ ನೆರಳೂ ಸಿಗದು, ಕೈಗೆ ಹಣ್ಣೂ ಎಟುಕದು. ಹಾಗಾಗಾದೆ ಸಮಾಜಕ್ಕೆ ಸಹಾಯವಾಗಬೇಕು ಎಂದು ಬೀಳಗಿ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಅಥಣಿ ವೀರಣ್ಣ, ಎಂಬಿಬಿಎಸ್‌ಗೆ ಹೋಲಿಸಿದರೆ ಬಿ.ಕಾಂ. ಅಧ್ಯಯನ ಅವಧಿ ಕಡಿಮೆ ಹಾಗೂ ಅವಕಾಶಗಳೂ ಹೆಚ್ಚು. ಅಧ್ಯಯನಕ್ಕೆ ಹೆಚ್ಚಿನ ವೆಚ್ಚವೂ ಆಗುವುದಿಲ್ಲ ಎಂದು ಹೇಳಿದರು.
ಬದಲಾಗುವ ತಂತ್ರಜ್ಞಾನಕ್ಕೆ ಅನುಗುಣವಾಗಿ ವಾಣಿಜ್ಯ ವಿದ್ಯಾ ರ್ಥಿಗಳು ಹೊಂದಿಕೊಳ್ಳಬೇಕು. ಸಂಪರ್ಕ ಕೌಶಲ್ಯವನ್ನು ರೂಢಿಸಿ ಕೊಳ್ಳಬೇಕು ಎಂದವರು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ.ವೀರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಸ್ವಾಗತಿಸಿ ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಗಳಿಗಾಗಿ ಮಾದರಿಗಳ ಪ್ರದರ್ಶನ, ಭಿತ್ತಿಚಿತ್ರಗಳ ಪ್ರದರ್ಶನ, ನೋಟು ಗಳ ಪ್ರದರ್ಶನ, ರಸಪ್ರಶ್ನೆ ಹಾಗೂ ಯುವ ಉದ್ಯಮಿಗಳ ಕಾರ್ಯಕ್ರ ಮಗಳನ್ನು ಹಮ್ಮಿಕೊಳ್ಳಲಾಗಿತ್ತು.