ಅಸ್ವಸ್ಥ ಕರಡಿಯನ್ನು ರಕ್ಷಿಸಿದ ಗ್ರಾಮಸ್ಥರು

ಕೂಡ್ಲಿಗಿ, ಏ.24-  ತಾಲ್ಲೂಕಿನ ಕರಡಿಹಳ್ಳಿ ಹೊರವಲಯದಲ್ಲಿ ಕರಡಿಯೊಂದು ತೀರಾ ಅಸ್ವಸ್ಥತೆಯಿಂದ ಬಳಲಿ ಬಿದ್ದಿರುವ ರೀತಿಯಲ್ಲಿ ಪತ್ತೆಯಾಗಿದೆ.

ಗ್ರಾಮದ ಹೊರವಲಯದ ತೋಪೊಂದರಲ್ಲಿ ಎಚ್ಚರವಿಲ್ಲದ ಸ್ಥಿತಿಯಲ್ಲಿ ಕರಡಿ ಕಂಡುಬಂದಿದ್ದು. ಗ್ರಾಮದ ಮುಖಂಡ ಮಾಳ್ಗಿ ಕೃಷ್ಣಪ್ಪ, ನಾಗರಾಜ ನೇತೃತ್ವದಲ್ಲಿ ಗ್ರಾಮಸ್ಥರು ಸಮಯ ಪ್ರಜ್ಞೆ ಮೆರೆದು ಕರಡಿಗೆ ಪ್ರಥಮ ಚಿಕಿತ್ಸೆ ನೀಡಿ ಸಂರಕ್ಷಿಸಿದ್ದಾರೆ.

ನಂತರ  ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಕರಡಿಯನ್ನು ಒಪ್ಪಿಸಿದ್ದಾರೆ. ಕೆಲ ಗ್ರಾಮಸ್ಥರೇ ಹೇಳುವಂತೆ ಕರಡಿ, ಕರಡಿಹಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ಬಹುದಿನಗಳಿಂದ ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ಈ ಹಿನ್ನೆಲೆಯಲ್ಲಿ  ಕಿಡಿಗೇಡಿಗಳು ಕರಡಿಗೆ ಜೀವಕ್ಕೆ ಕುತ್ತು ತರುವ ನಿಟ್ಟಿ ನಲ್ಲಿ ವಿಷಪೂರಿತ ಆಹಾರ  ಇಟ್ಟಿರ ಬಹುದು ಎಂದು ಊಹಿಸಲಾಗಿದೆ.

ಕರಡಿಗೆ ಅಗತ್ಯ ಚಿಕಿತ್ಸೆ ನೀಡಿದ್ದು, ಇದೀಗ ಸಹಜ ಸ್ಥಿತಿಗೆ ಮರಳಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಗ್ರಾಮದ ಮಾಳ್ಗಿ ಕೃಷ್ಣಪ್ಪ ಹಾಗೂ ಯುವಕರ ತಂಡದ ವನ್ಯ ಮೃಗ ಪ್ರೀತಿಯನ್ನು ಕಂಡು ಅರಣ್ಯ ಇಲಾಖೆ ಶಹಬ್ಬಾಸ್ ಗಿರಿ ನೀಡಿದೆ.  ಪ್ರಸ್ತುತ ಕರಡಿ ದರೋಜಿ ಕರಡಿ ಧಾಮದಲ್ಲಿ ಆರೋಗ್ಯವಾಗಿದೆ.

error: Content is protected !!