ದಾವಣಗೆರೆ, ಜು.16- ಡಯಟ್ ಪ್ರಾಂಶುಪಾಲ ಹೆಚ್.ಕೆ ಲಿಂಗರಾಜ್ ಅವರ ವ್ಯಕ್ತಿತ್ವ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅನನ್ಯ ಸೇವೆ ಕುರಿತಂತೆ ಸ್ಥಳೀಯ ಸೌಹಾರ್ದ ಪ್ರಕಾಶನ ಪ್ರಕಟಿಸಿರುವ `ಶಿಕ್ಷಣ ಯೋಗಿ’ ಅಭಿನಂದನಾ ಗ್ರಂಥದ ದ್ವಿತೀಯ ಮುದ್ರಣದ ಕೃತಿ ನಿನ್ನೆ ಬಿಡುಗಡೆಗೊಂಡಿತು.
ಸರ್ಕಾರದ ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಹೆಚ್.ಕೆ. ಲಿಂಗರಾಜ್ ಅವರ ನಿವಾಸದಲ್ಲಿ ನಿನ್ನೆ ಏರ್ಪಾ ಡಾಗಿದ್ದ ಸರಳ ಸಮಾರಂಭದಲ್ಲಿ ಬಾಪೂಜಿ ಇಂಜಿನಿ ಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಸಿ.ಹೆಚ್. ಮುರಿಗೇಂದ್ರಪ್ಪ, ಶ್ರೀಮತಿ ಲೀಲಾವತಿ ಲಿಂಗರಾಜ್, ಬಿಇಒ ಕೊಟ್ರೇಶ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಡಯಟ್ ಉಪನ್ಯಾಸಕರುಗಳಾದ ಮಹೇಶ್ ದೊಡ್ಡಮನಿ, ರವಿನಾಯ್ಕ್, ಲೋಲಾಕ್ಷಿ, ರಾಜಶೇಖರ್, ಎಂ. ಟಿ. ಶರಣಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೌಹಾರ್ದ ಪ್ರಕಾಶನದ ಪ್ರಕಾಶಕರೂ ಆಗಿರುವ ಹಿರಿಯ ಸಾಹಿತಿ ಶ್ರೀಮತಿ ಎ.ಸಿ. ಶಶಿಕಲಾ ಶಂಕರಮೂರ್ತಿ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.