ದಾವಣಗೆರೆ, ಜು.14- ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಕುಟುಂಬದಿಂದ ನೀಡುತ್ತಿ ರುವ ಉಚಿತ ಕೋವಿಡ್ -19 ಲಸಿಕೆ ಅಭಿಯಾನವು ನಗರದ 24ನೇ ವಾರ್ಡಿನಲ್ಲಿ ನಿನ್ನೆ ನಡೆಯಿತು. ಪಾಲಿಕೆ ಸದಸ್ಯ ಎ.ನಾಗರಾಜ್, ಕಾಂಗ್ರೆಸ್ ಮುಖಂಡರು ಗಳಾದ ನಲ್ಲೂರು ಎಸ್.ರಾಘವೇಂದ್ರ, ಬೆಳ್ಳೂಡಿ ಮಂಜುನಾಥ್, ಗೋಪಿ, ಬಸಣ್ಣ, ವಾಮನ ಹಾಗೂ ಮತ್ತಿತರರು ಅಭಿಯಾನದ ಮುಂದಾಳತ್ವ ವಹಿಸಿದ್ದರು.
December 26, 2024