ದಾವಣಗೆರೆ, ಜು.12- ನಗರದ ರಂಜೀತ್ಮಲ್ ಗಾಂಧಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ಭಾರತೀಯ ಶಿಕ್ಷಣ ಮಂಡಳಿ (ದಾವಣಗೆರೆ) ಸಹಯೋಗದೊಂದಿಗೆ ಸ್ಥಳೀಯ ಆರ್.ಜಿ. ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ `ರಾಷ್ಟ್ರೀಯ ಶಿಕ್ಷಣ ನೀತಿ – 2020ರ ಉನ್ನತ ಶಿಕ್ಷಣ ನೀತಿ’ ವಿಷಯ ಕುರಿತಾದ ಒಂದು ದಿನದ ಅಂತರ್ಜಾಲ ಆಧಾರಿತ ರಾಷ್ಟ್ರೀಯ ವಿಚಾರ ಸಂಕಿರಣ ಇಂದು ನಡೆಯಿತು.
ವಿಜಯಪುರದ ಅಕ್ಕಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ.ಮೀನಾ ಚಂದಾವರ್ಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿವಿಯ ಗಣಕ ತಂತ್ರ ವಿಭಾಗದ ಮುಖ್ಯಸ್ಥ ಡಾ.ಕರುಣಾಕರ್, ಸಿಇಎಸ್ಎಸ್ ಮತ್ತು ಮಾಜಿ ನಿರ್ದೇಶಕರು ಕಲಿಕೆ ಮತ್ತು ಅಭಿವೃದ್ಧಿ ವಿಭಾಗದ ಮಾರ್ವಾಡಿ ವಿವಿ ರಾಜೋ ಕೋಟ್ನ ಹಿರಿಯ ಸಲಹೆಗಾರ ಡಾ.ರಾಜೇಂದ್ರ ಕುಮಾರ್ ವಿ.ಜೋಶಿ, ತುಮಕೂರು ವಿವಿಯ ಉಪ ಕುಲಪತಿ ಪ್ರೊ.ವೈ.ಎಸ್.ಸಿದ್ದೇಶ್ಗೌಡ, ದಾವಣಗೆರೆ ವಿವಿಯ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಶ್ರೀಮತಿ ಹೆಚ್.ಎಸ್.ಅನಿತಾ ಉಪಸ್ಥಿತರಿದ್ದರು.
ಆರ್.ಜಿ. ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ವೇತಾ ಆರ್. ಗಾಂಧಿ, ಆರ್.ಜಿ.ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ನ ಪ್ರಾಂಶುಪಾಲ ಸಿ.ಸುನೀಲ್ಕುಮಾರ್,
ಆರ್.ಜಿ.ಪದವಿ ಪೂರ್ವ ಕಾಮರ್ಸ್ನ ಪ್ರಾಂಶುಪಾಲ ಎಂ.ಎಸ್.ವಿಜಯ್ ಮತ್ತಿತರರಲ್ಲದೇ, ಕರ್ನಾಟಕ, ತಮಿಳುನಾಡು, ಕೇರಳ, ರಾಜಸ್ಥಾನ್, ಗುಜರಾತ್, ಓರಿಸ್ಸಾ ರಾಜ್ಯಗಳ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.