ಹರಪನಹಳ್ಳಿ, ಫೆ.20 – ಸರ್ಕಾರದ ವಿವಿಧ ಯೋಜನೆಗಳು ಸಾರ್ವಜನಿಕರಿಗೆ ಸಮ ರ್ಪಕ ವಾಗಿ ತಲುಪಬೇಕು ಎಂಬ ಉದ್ದೇಶ ದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿ ಕೊಳ್ಳ ಲಾಗಿದೆ ಎಂದು ಉಪವಿಭಾಗಾಧಿಕಾರಿ ಜಿ.ಎಚ್. ಚಂದ್ರಶೇಖರಯ್ಯ ಹೇಳಿದರು.
ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮನೆ ಮನೆಗೆ ಭೇಟಿ ನೀಡಿದಾಗ ವೃದ್ದಾಪ್ಯ ವೇತನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಕಂಡು ಬಂದಿವೆ. ಸರ್ಕಾರದ ಯಾವುದೇ ಇಲಾಖೆಗಳಲ್ಲಿ ಯಾವುದೇ ಸಮಸ್ಯೆ ಇದ್ದರೆ ಹೇಳಿ ಪರಿಹರಿಸುತ್ತೇವೆ. ಅಧಿಕಾರಿಗಳನ್ನು ಹುಡುಕಿಕೊಂಡು ಅಲೆದಾಡಬಾರದು, ಸರ್ಕಾರದ ಯಾವುದೇ ಇಲಾಖೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಮೌಖಿಕವಾಗಿ ಅಥವಾ ಲಿಖಿತವಾಗಿ ಅರ್ಜಿ ಸಲ್ಲಿಸಿ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
ತಹಶೀಲ್ದಾರ್ ಎಲ್.ಎಂ. ನಂದೀಶ್ ಮಾತನಾಡಿ 92 ಪಿಂಚಣಿಗೆ ಸಂಬಂಧ ಪಟ್ಟ ಅರ್ಜಿಗಳು ಬಂದಿವೆ, ಅದರಲ್ಲಿ 62 ಅರ್ಜಿಗಳನ್ನು 3-4 ದಿನದಲ್ಲಿ ಆದೇಶ ಮಾಡಿ ಕೊಡುತ್ತೇವೆ, 45 ಹಕ್ಕು ಬದಲಾವಣೆಯ ಅರ್ಜಿಗಳು ಬಂದಿವೆ, ಪಹಣಿ ತಿದ್ದು ಪಡಿಗೆ 36 ಅರ್ಜಿಗಳು ಬಂದಿವೆ. ಇವೆಲ್ಲವುಗಳನ್ನು ಬಗೆಹರಿಸಿ ಕೊಡುತ್ತೇವೆ ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ಮತ್ತಿಹಳ್ಳಿ ಗ್ರಾಮದ ಮನೆ ಮನೆಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಜನರ ಅಹವಾಲು ಆಲಿಸಿದರು.
ಗ್ರಾ.ಪಂ ಅಧ್ಯಕ್ಷೆ ನಾಗವೇಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ, ಕೃಷಿ ಎಡಿ ಮಂಜುನಾಥ ಗೊಂದಿ, ವಲಯ ಅರಣ್ಯಾಧಿಕಾರಿ ಭರತ್, ಡಿ.ತಳವಾರ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಯರಾಜ, ಸಿಡಿಪಿಓ ಮಂಜು ನಾಥ, ಬಿಸಿಎಂ ಇಲಾಖೆಯ ಭೀಮಪ್ಪ, ಬಿ.ಎಚ್ .ಚಂದ್ರಪ್ಪ, ಇಸಿಒ ಗಿರಜ್ಜಿ ಮಂಜುನಾಥ, ಪಿಡಿಒ ಮುಕ್ತರ್ ಅಲಿ, ಮತ್ತಿಹಳ್ಳಿ ಪಿ.ರಾಮಣ್ಣ, ಗ್ರಾ.ಪಂ ಸದಸ್ಯರುಗಳಾದ ಜಿ.ಹನುಮಂತಪ್ಪ, ಶಿವಕುಮಾರ ಸೇರಿದಂತೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.