ತರಳಬಾಳು ಹುಣ್ಣಿಮೆ-2021 : ಸಿಂಹಾವಲೋಕನ

ಸಿರಿಗೆರೆ, ಫೆ.20- ಪ್ರತಿ ವರ್ಷವೂ ತರಳಬಾಳು ಹುಣ್ಣಿಮೆ ಸಂದರ್ಭದ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಬಹುಮಾನ ನೀಡಲಾಗಿತ್ತು. ಈ ಬಾರಿ ಕೊರೊನಾ ಕಾರಣದಿಂದ ‘ತರಳಬಾಳು ಜಗದ್ಗುರು ನರ್ಸರಿ ಮತ್ತು ಪ್ರೈಮರಿ ಶಾಲೆ’ ಹಾಗೂ ‘ತರಳಬಾಳು ಸಿಬಿಎಸ್‍ಸಿ’ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪೋಷಕರಿಗೆ ಮಾತ್ರ ವಿವಿಧ ಸ್ಪರ್ಧೆಗಳಾದ ಚಿತ್ರಕಲೆ, ಜನಪದಗೀತೆ, ವೇಷಭೂಷಣ, ರಂಗೋಲಿ ಸ್ಪರ್ಧೆಗಳನ್ನು ಇಂದು ನಡೆಸಲಾಯಿತು.

ಪೋಷಕರು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದು, ಅವರಿಗೆ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಮುಖ್ಯೋಪಾಧ್ಯಾಯಿನಿ ಎಂ.ಎನ್.ಶಾಂತಾ ತಿಳಿಸಿದರು.

ಬೆಳಿಗ್ಗೆ ವಿದ್ಯಾರ್ಥಿನಿಯರು ಹಾಗೂ ಶಾಲಾ-ಕಾಲೇಜಿನ ಶಿಕ್ಷಕರು, ಉಪನ್ಯಾಸಕರುಗಳು ಶಿವಮಂತ್ರ ಲೇಖನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ತರಳಬಾಳು ಹುಣ್ಣಿಮೆ-2021ರ ಸಿಂಹಾವಲೋಕನದಲ್ಲಿ  ಅರಸೀಕೆರೆ, ಬೆಂಗಳೂರು, ಚನ್ನಗಿರಿ ಕಾರ್ಯಕ್ರಮಗಳಲ್ಲಿ ನಡೆದ ಹುಣ್ಣಿಮೆಯ ಮಹೋತ್ಸವದ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಂಗಭೂಮಿ ಹಿರಿಯ ನಟ ಮಾಸ್ಟರ್ ಹಿರಣಯ್ಯ, ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದೆ ವಾಣಿ ಗಣಪತಿ ಬೆಂಗಳೂರು, ಲಂಡನ್‍ನ ಮೇಯರ್ ನೀರಜ್ ಪಾಟೀಲ್, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಸಿರಿಗೆರೆ ಬೃಹನ್ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಕ್ಷೇತ್ರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಚನ ಬಿತ್ತರಿಸಲಾಯಿತು. 

ತರಳಬಾಳು ಹುಣ್ಣಿಮೆ ಸಿಂಹಾವಲೋಕನದಲ್ಲಿ ಡಾ.ಶಿವ ಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಒಬ್ಬ ರಾಜ ಕಾರಣಿ ಚುನಾವಣೆಗೆ ಎಷ್ಟು ಖರ್ಚು ಮಾಡುತ್ತಾನೋ ಅದರ ಕಾಲುಭಾಗದಷ್ಟು ನಮ್ಮ ತರಳಬಾಳು ಹುಣ್ಣಿಮೆಗೆ ಖರ್ಚಾಗು ತ್ತದೆ ಹಾಗೂ ಆತ್ಮದ ಹಸಿವು ಶರೀರದ ಹಸಿವಿಗಿಂತಲೂ ಹೆಚ್ಚು. ಆದ್ದರಿಂದ ಇಂತಹ ವೇದಿಕೆಗಳು ಭಕ್ತರ ಬರುವಿಕೆಗೆ ಸಾಕ್ಷಿಯಾಗಿವೆ ಎಂದು ಆಶೀರ್ವಚನದಲ್ಲಿ ತಿಳಿಸಿದರು.

ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ  ಜನಪದ ಗೀತೆ :  ವೀಣಾ (ಪ್ರಥಮ), ಜ್ಯೋತಿಲಕ್ಷ್ಮಿ(ದ್ವಿತೀಯ), ಮಂಜಪ್ಪ(ತೃತೀಯ), ವೇಷಭೂಷಣ ಸ್ಪರ್ಧೆ : ಚೇತನ (ಪ್ರಥಮ),  ಜ್ಯೋತಿಲಕ್ಷ್ಮಿ(ದ್ವಿತೀಯ), ಶ್ವೇತ (ತೃತೀಯ), ರಂಗೋಲಿ ಸ್ಪರ್ಧೆ: ವೀಣಾ (ಪ್ರಥಮ), ಪವಿತ್ರ (ದ್ವಿತೀಯ), ಸವಿತ (ತೃತೀಯ).

error: Content is protected !!