ದಾವಣಗೆರೆ, ಜು.9- ಇಲ್ಲಿನ ಶಾಂತಿನಗರದ 4ನೇ ಕ್ರಾಸ್ ಹಾಗೂ ಕುಂದುವಾಡ ಮುಖ್ಯ ರಸ್ತೆ ಈ ಎರಡೂ ಬೀದಿಗಳಿಗೆ ಬೋರ್ ನೀರಿನ ಪೈಪ್‌ಲೈನ್ ಶಾಶ್ವತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ದಾವಣಗೆರೆ ಶಾಂತಿನಗರ ಸ್ಥಳೀಯ ಸಮಿತಿ ನೇತೃತ್ವದಲ್ಲಿ ನಾಗರಿಕರು ಶಾಂತಿನಗರದಲ್ಲಿ ಇಂದು ಸಂಜೆ ಪ್ರತಿಭಟನೆ ನಡೆಸಿದರು.
ನಗರದ 44ನೇ ವಾರ್ಡ್ ಶಾಂತಿನಗರದ 4ನೇ ಕ್ರಾಸ್ ಹಾಗೂ ಕುಂದುವಾಡಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಬೋರ್ ನೀರಿನ ಪೈಪ್‌ಲೈನ್ ಕಾಮಗಾರಿ ಆಗದೇ ಇರುವುದರಿಂದ ಅಲ್ಲಿನ ಜನರಿಗೆ ನೀರಿನ ಸಮಸ್ಯೆಯಾಗುತ್ತಿದೆ. ಕೂಡಲೇ ಈ ಎರಡೂ ರಸ್ತೆಗಳಿಗೆ ಬೋರ್ ನೀರಿನ ಪೈಪ್‌ಲೈನ್ ವ್ಯವಸ್ಥೆ ಮಾಡಿ, ಶಾಶ್ವತವಾ ದಂತಹ ನೀರಿನ ವ್ಯವಸ್ಥೆ ಮಾಡಿಕೊಡ ಬೇಕೆಂದು ವಾರ್ಡಿನ ಪಾಲಿಕೆ ಸದಸ್ಯರಿಗೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿ 2 ದಿನಗಳಿಗೊಮ್ಮೆ ಹೊಳೆ ನೀರು ಬಿಡಬೇಕು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಮನೆಗೆಲಸದ ಕಾರ್ಮಿಕರಿದ್ದು, ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಸ್ಥಳೀಯ ಸಮಿತಿ ಸಂಚಾಲಕ ಮಧು ತೊಗಲೇರಿ, ಮಮತ, ನಾಗಸ್ಮಿತ, ರತ್ನಮ್ಮ, ನೀಲಮ್ಮ, ರೂಪ, ಜ್ಯೋತಿ, ಫಕ್ಕೀರಮ್ಮ, ಹೇಮಲತಾ, ಸೌಮ್ಯ, ಸತ್ಯಮ್ಮ, ಕವಿತಾ, ಚೈತ್ರ, ಪ್ರಭಾವತಿ, ಶಿವಲೀಲಾ ಸೇರಿದಂತೆ ಇತರರಿದ್ದರು.