ಸಿಜಿ ಆಸ್ಪತ್ರೆಯಲ್ಲಿ ನಾಗರಹಾವು ಪ್ರತ್ಯಕ್ಷ

ದಾವಣಗೆರೆ, ಜು.9- ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಬೆಳ್ಳಂಬೆಳಿಗ್ಗೆ ನಾಗರಹಾವು ಪ್ರತ್ಯಕ್ಷ್ಯವಾಗಿದ್ದು, ಆಸ್ಪತ್ರೆಯ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಕಾರ್ಮಿಕರು ಆತಂಕಗೊಂಡ ಘಟನೆ ಇಂದು ನಡೆದಿದೆ. 

ಆಸ್ಪತ್ರೆಯ ಆವರಣದಲ್ಲಿರುವ ಬಯೋ ಮೆಡಿಕಲ್ ತ್ಯಾಜ್ಯ ಸಂಗ್ರಹ ಘಟಕದ ಬಳಿ ಕಾರ್ಮಿಕರು ತ್ಯಾಜ್ಯ ವಿಲೇವಾರಿ ಕಾರ್ಯ ಕೈಗೊಂಡಿದ್ದರು. ಆಗ ನಾಗರ ಹಾವು ಕಾಣಿಸಿಕೊಂಡಿತು. ಒಮ್ಮೆಲೇ ಸಿಬ್ಬಂದಿ ಆತಂಕಕ್ಕೆ ಒಳಗಾದರು. ಕೂಡಲೇ ಹಾವು ಹಿಡಿಯುವಲ್ಲಿ ನಿಪುಣರಾದ ಯಲ್ಲಪ್ಪ ಅವರು ವಿಷಯ ತಿಳಿದು ಸ್ಥಳಕ್ಕಾಗಮಿಸಿ,  ಹಾವು ಹಿಡಿಯುವ ಮೂಲಕ ಆತಂಕ ನಿವಾರಣೆ ಮಾಡಿದರು. ಈ ಹಾವನ್ನು ಕೊಂಡಜ್ಜಿಯ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುವುದಾಗಿ ಯಲ್ಲಪ್ಪ ತಿಳಿಸಿದ್ದಾರೆ.

error: Content is protected !!