ದಾವಣಗೆರೆ, ಜು.9- ಕೊರೊನಾದ ಸಂದಿಗ್ದ ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಶ್ರಮಿಸಿದ ಅನೇಕ ವೈದ್ಯರುಗಳ ಪೈಕಿ ಒಬ್ಬರಾಗಿರುವ ಶ್ವಾಸಕೋಶ ತಜ್ಞ ಡಾ. ರಾಜೇಶ್ ಅವರನ್ನು ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನಿಂದ ಗೌರವಿಸಲಾ ಯಿತು. ಬ್ಯಾಂಕಿನ ಸಭಾಂಗಣದಲ್ಲಿ ಕಳೆದ ವಾರ ನಡೆದ ಸಭೆ ಯೊಂದರ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರೂ ಆಗಿರುವ ಡಾ. ರಾಜೇಶ್ ಅವರನ್ನು ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಅವರು ಶಾಲು ಹೊದಿಸಿ ಸನ್ಮಾನಿಸುವುದರ ಮೂಲಕ ಅವರ ಸೇವೆಗೆ ಪ್ರೋತ್ಸಾಹಿಸಿದರು.
January 24, 2025