ದಾವಣಗೆರೆ, ಜು.8- ರೋಟರಿ ಕ್ಲಬ್ ದಾವಣಗೆರೆ ಎರಡು ನೂರು ಜನರಿಗೆ ಕೊರೊನಾ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಕೊರೊನಾ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್, ಡಾ. ನಟರಾಜ್, ಡಾ. ನಾಗರಾಜ್, ಡಾ. ಮೀನಾಕ್ಷಿ ಅವರಿಗೆ ಅವರ ವೈದ್ಯಕೀಯ ಗುರುಗಳಾದ ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಛೇರ್ಮನ್ ಡಾ. ಎ.ಎಂ. ಶಿವಕುಮಾರ್ ಅವರಿಂದ ಸನ್ಮಾನಿಸಲಾಯಿತು.
ಡಾ. ಎ.ಎಂ. ಶಿವಕುಮಾರ್ ಅವರಿಗೆ ಅವರ ವೈದ್ಯಕೀಯ ಶಿಷ್ಯರಿಂದ ಗೌರವ ಸಮರ್ಪಿಸಿದ್ದು ವಿಶೇಷವಾಗಿತ್ತು. ನಂತರ ಸಿ.ಜಿ. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಾದ ಸಿಸ್ಟರ್ ಬಿ. ಸವಿತಾ, ಸುಮಿತಾ ಎನ್. ಹೆಗ್ಡೆ, ಎಸ್. ಹುಲಿಗೆಮ್ಮ ಅವರನ್ನು ಇನ್ನರ್ ವ್ಹೀಲ್ ಸದಸ್ಯೆಯರಾದ ಸುನಿತಾ ಮೃತ್ಯುಂಜಯ, ಅನಿತಾ ಆನಂದ್, ಚೂಡಾಮಣಿ, ವಿಜಯಾ ನಟರಾಜ್, ನಿರ್ಮಲ ಉಮಾಶಂಕರ್ ಮತ್ತಿತರರು ಸನ್ಮಾನಿಸಿದರು.
ರೋಟರಿ ಕ್ಲಬ್ ದಾವಣಗೆರೆ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ, ಕಾರ್ಯದರ್ಶಿ ಬೇತೂರ್ ಜಗದೀಶ್, ಸಂಚಾಲಕ ಅಂದನೂರು ಆನಂದ್, ಆರ್.ಟಿ. ನಟರಾಜ್, ಹಿರಿಯ ಸದಸ್ಯರಾದ ಎಸ್.ಕೆ. ವೀರಣ್ಣ, ಆರ್.ಎಸ್. ವಿಜಯಾನಂದ್, ಜಿಲ್ಲಾ ಫಾರ್ಮಸಿ ಅಧಿಕಾರಿ ಕೊಟ್ರೇಶ್ ಬಣಕಾರ್ ಮೊದಲಾದವರು ಲಸಿಕಾ ಶಿಬಿರದ ನೇತೃತ್ವ ವಹಿಸಿದ್ದರು. ರೋಟರಾಕ್ಟ್ ಸದಸ್ಯರಾದ ಸಂದೇಶ್ ಆರ್.ಎಂ., ಸೊಕ್ಕೆ ವಿನಯ್, ತೇಜಸ್ ಆರ್.ಯು, ತನುಶ್ರೀ ಆರ್.ಯು, ಶ್ರೇಯಸ್ ಜಿ.ಪಿ, ಶಿವದೀಪ್ ಎನ್.ಎಸ್. ಮತ್ತಿತರರು ಶಿಬಿರವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.