ಸಂಸದ ಸಿದ್ದೇಶ್ವರ, ಬಿ.ಜಿ. ಅಜಯ್ ಕುಮಾರ್ ಹುಟ್ಟುಹಬ್ಬ
ದಾವಣಗೆರೆ, ಜು.8- ಜಾಲಿನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಜಿ.ಎಂ.ಸಿದ್ದೇಶ್ವರ, ಬಿ.ಜಿ.ಅಜಯ್ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಮಹಾಪೌರ ಬಿ.ಜಿ.ಅಜಯ್ಕುಮಾರ್ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಪ್ರಯುಕ್ತ ಉತ್ತಮ ಹಸಿರು ಪರಿಸರ ನಿರ್ಮಾಣಕ್ಕಾಗಿ 1100 ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಿದ್ದೇಶ್ವರ ಅವರು ಸಸಿ ನೆಟ್ಟು ನೀರು ಹಾಯಿಸುವ ಮೂಲಕ ಚಾಲನೆ ನೀಡಿದರು.
1990 ರಲ್ಲಿ ದೇಶದಾದ್ಯಂತ ಸಂಚರಿಸಿದ ರಾಮ ಜ್ಯೋತಿ ರಥ ಯಾತ್ರೆ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಗೋಲಿಬಾರ್ನಲ್ಲಿ ಗುಂಡೇಟಾಗಿ ಪ್ರಾಣ ತ್ಯಾಗ ಮಾಡಿ, ಹುತಾತ್ಮರಾದ ಶ್ರೀನಿವಾಸ್, ಅಮರೇಶ್, ಶಿವಾಜಿರಾವ್, ಚಿನ್ನಪ್ಪ, ಚಂದ್ರಶೇಖರ್, ದುರ್ಗಪ್ಪ, ರಾಮಕೃಷ್ಣ ಮತ್ತು ಗಣೇಶ್ ಈ ಕುಟುಂಬಬಳಿಗೆ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಬಿ.ಜಿ.ಅಜಯ್ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಗೌರವ ಧನವನ್ನು ಅವರ ಕುಟುಂಬಗಳಿಗೆ ವಿತರಿಸಿ, ಸನ್ಮಾನಿಸಿ, ಗೌರವಿಸಲಾಯಿತು.
ಗಣೇಶರಾವ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮುಖಂಡರಾದ ಶಿವಕುಮಾರ್, ಶ್ರೀಮತಿ ಚೇತನಾ ಶಿವಕುಮಾರ್, ಕರೂರು ಗಣೇಶ್, ಜಿ.ಪ್ರತಾಪ್, ಬಿ.ಹೆಚ್.ಪಿ.ರವಿಯಣ್ಣ, ರಾಜು ಅಳಗೋಡಿ, ಸಂತೋಷ್ ಪೈಲ್ವಾನ್, ಮಂಜು ಪೈಲ್ವಾನ್, ಮಂಜುನಾಥ್ ಪವಾರ್, ಆನಂದ್, ಗುಡ್ಡಪ್ಪ, ಪವನ್ ನರಗುಂದ ಮತ್ತು ಇತರರು ಉಪಸ್ಥಿತರಿದ್ದರು.