ದೊಡ್ಡ – ದೊಡ್ಡ ಸಮಾಜಗಳ ಹೋರಾಟಗಳಿಂದ ಮೀಸಲಾತಿಗೆ ಬೆಲೆ ಇಲ್ಲದಂತಾಗಿದೆ

ಹರಪನಹಳ್ಳಿ : ಚಲವಾದಿ ಮಂಗಳ ವಾದ್ಯ ಕಲಾವಿದರ ಜಾಗೃತಿ ಸಮಾವೇಶದಲ್ಲಿ ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಅಧ್ಯಕ್ಷ ಮಲ್ಲಿಕಾರ್ಜುನ ಮಾನ್ಪಡೆ

ಹರಪನಹಳ್ಳಿ, ಫೆ.13 – ಪರಿಶಿಷ್ಟ ಜಾತಿ, ಪಂಗಡ, 2ಎ ಮೀಸಲಾತಿಗೆ ದೊಡ್ಡ ದೊಡ್ಡ ಸಮಾಜದವರು ಹೋರಾಟ ಮಾಡುತ್ತಿರುವುದನ್ನು ನೋಡಿದರೆ ಮೀಸಲಾತಿಗೆ ಬೆಲೆ ಇಲ್ಲದಂತಾಗಿದೆ ಎಂದು ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಅಧ್ಯಕ್ಷ ಮಲ್ಲಿಕಾರ್ಜುನ ಮಾನ್ಪಡೆ ಹೇಳಿದರು.

ಪಟ್ಟಣದ ಶ್ರೀ ಚಂದ್ರಮೌಳೇಶ್ವರ ಸಭಾ ಮಂಟಪದಲ್ಲಿ ಚಲವಾದಿ ಮಂಗಳ ವಾದ್ಯ ಕಲಾವಿದರ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳೇ ಓದುತ್ತಿರುವುದ ರಿಂದ ಅವುಗಳನ್ನು ಉನ್ನತೀಕ ರಣಗೊಳಿಸಬೇಕಿದೆ. ಏಕೆಂದರೆ ಶಿಕ್ಷಣದ ಮೂಲಕ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ. ಇದರಿಂದ ದೇಶದ ಭವಿಷ್ಯ ಅಡಗಿದೆ. 

ಜಿಂದಾಲ್ ಲಕ್ಷ್ಮಿಮಿತ್ತಲ್ ರಂತಹ ದೈತ್ಯ ಉದ್ದಿಮೆದಾರರಿಗೆ ಸಾವಿರಾರು ಎಕರೆ ಭೂ ಪ್ರದೇಶವನ್ನು ನೀಡುತ್ತಾರೆ. ಬಡವರಿಗೆ ದಲಿತರಿಗೆ ನಿವೇಶನ ನೀಡಲು ಸರ್ಕಾರದ ಬಳಿ ಭೂಮಿ ಇಲ್ಲಾ ಸರ್ಕಾರದ ದ್ವಿಮುಖ ನೀತಿಯಿಂದ ಶ್ರೀಮಂತ ರೆಲ್ಲಾ ಒಂದಾಗಿ ಬಡವರಲ್ಲಿ ಜಾತಿಯ ವಿಷ ಬೀಜ ಬಿತ್ತಿ ಭೇದಭಾವಗಳಿಂದ ಸಂಘರ್ಷದಲ್ಲಿ ತೊಡಗಿರುವಂತೆ ನೋಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

ವಾದ್ಯಗಳನ್ನು ನುಡಿಸುವುದು ಅಥವಾ ಸಂಗೀತ ತಲೆತಲಾಂತರದಿಂದ ಕೆಲ ಸಮುದಾಯಗಳು ನುಡಿಸಿಕೊಂಡು ಬರುತ್ತಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಭಜಂತ್ರಿ ಸಮುದಾಯ, ಮಧ್ಯ ಕರ್ನಾಟ, ಕೋಲಾರ ಹಾಗೂ ಇತರೆಡೆ ಚಲವಾದಿ, ಕೊರಚ ಹಾಗೂ ಇತರೆ ಸಮುದಾಯಗಳು ಕರಕುಶ ಕಲೆಗಳೊಂದಿಗೆ ಮಂಗಳ ವಾದ್ಯಗಳನ್ನು ನುಡಿಸುತ್ತಿದ್ದಾರೆ. ಈ ದೇಶದ ಮೂಲ ನಿವಾಸಿಗರು ತಳ ಸಮುದಾಯದವರು. ಶುಭ ಸಮಾರಂಭಗಳಿಂದ ಹಿಡಿದು ಸಾವಿನವರೆಗೂ ವಾದ್ಯಗಳನ್ನು ನುಡಿಸುವ ಕಲಾವಿದರು ದಲಿತರೇ ಆಗಿದ್ದಾರೆ ಎಂದರು. 

ಮಂಗಳ ವಾದ್ಯ ಕಲಾವಿದರ ಕಲ್ಯಾಣ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಮಂಗಳ ವಾದ್ಯ ಕಲಾವಿದರಿಗೆ ಮಾಸಾಶನ ಒದಗಿಸಲು 2021-22ರ ಬಜೆಟ್‍ನಲ್ಲಿ ಅನುದಾನ ಒದಗಿಸಬೇಕು. ವಾದ್ಯಗಳ ಖರೀದಿಗೆ ಶೇ.75ರಷ್ಟು ರಿಯಾಯಿತಿ ಹಾಗೂ ಶೇ.25ಕ್ಕೆ ಸಾಲ ಸೌಲಭ್ಯ ನೀಡಬೇಕು. ಇನ್ನೂ ಮುಂತಾದ ಬೇಡಿಕೆಗಳಿಗೆ ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಿದರು. 

ಮುಖಂಡರಾದ ಹಗರಿಬೊಮ್ಮನಹಳ್ಳಿ ಜಗನಾಥ, ಚಲವಾದಿ ಷಣಮುಖಪ್ಪ, ಹಾಲಪ್ಪ ಭಜಂತ್ರಿ, ಪರಶುರಾಮ ಭಜಂತ್ರಿ, ರಾಜಕುಮಾರ ಭಜಂತ್ರಿ, ಚಲುವಾದಿ ಫಕೀರಪ್ಪ, ಸಿ,ಕೊಟ್ರೇಶ್, ಸಿ.ಅಜ್ಜಪ್ಪ ರಾಮಣ್ಣ ಚಿಂತ್ರಪಳ್ಳಿ ರೇವಪ್ಪ, ಮರಿಕೆಂಚಪ್ಪ ನೇತ್ರಾವತಿ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!