ಹರಿಹರದ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್
ಹರಿಹರ, ಏ.15- ಶೋಷಿತರ ಏಳಿಗೆಯನ್ನೇ ಜೀವನದ ಗುರಿಯನ್ನಾಗಿಸಿಕೊಂಡಿದ್ದ ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಬದುಕು ಅನುಸರಣೀಯ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ಬಹುದೊಡ್ಡ ರಾಷ್ಟ್ರವಾಗಿದ್ದು, ಹಲವಾರು ಜಾತಿ, ಧರ್ಮ, ಮತಗಳು ಇದ್ದರೂ ಸಹ ವಿವಿಧತೆಯಲ್ಲಿ ಏಕತೆಯನ್ನು ಒಳಗೊಂಡು ಸಂವಿಧಾನದ ಆಶ್ರಯದಲ್ಲಿ ನಡೆಯುತ್ತಿದೆ. ಅಲ್ಲದೆ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ವನ್ನೂ ಒಳಗೊಂಡಿದ್ದು ಅದಕ್ಕೆ ಕಾರಣ ಭಾರತ ಭಾಗ್ಯವಿಧಾತ ಅಂಬೇಡ್ಕರ್. ರಾಷ್ಟ್ರದ ಪ್ರತಿಯೊಬ್ಬರಿಗೂ ಸಂವಿಧಾನದಡಿಯಲ್ಲಿ ಪ್ರಾಧಾನ್ಯತೆ ಮತ್ತು ಕರ್ತವ್ಯಗಳನ್ನು ಕಲ್ಪಿಸಿಕೊಟ್ಟ ಮಹಾನ್ ಚೇತನ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ದೂಡಾ ಸದಸ್ಯ ರಾಜು ರೋಖಡೆ, ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಶೆಟ್ಟಿ, ಹೆಚ್. ಮಂಜಾನಾಯ್ಕ, ನಗರಸಭಾ ಸದಸ್ಯರಾದ ರಜನಿ ಕಾಂತ್, ನೀತಾ ಮೆಹರ್ವಾಡೆ, ಅಶ್ವಿನಿ ಕೃಷ್ಣ, ಮುಖಂ ಡರಾದ ಎ.ಪಿ. ಆನಂದ, ತುಳಜಪ್ಪ ಭೂತೆ, ಕೊಂಡಜ್ಜಿ ರಾಘವೇಂದ್ರ, ಜಿ.ಎಂ. ಪ್ರಶಾಂತ್ ಕುಮಾರ್, ಸಂತೋಷ್ ಗುಡಿಮನಿ, ಸುರೇಶ್ ತೆರದಾಳ್, ಹೆಚ್.ಎಸ್. ರಾಘವೇಂದ್ರ, ಮಹಾಂತೇಶಪ್ಪ ಕೆಂಚನಹಳ್ಳಿ, ಆನಂದ, ಸುನೀಲ್ ಕುಮಾರ್, ವಿನಾಯಕ ಆರಾಧ್ಯ ಮಠ, ಮೊಬೈಲ್ ರವಿ, ಕಿರಣ್ ಮೂಲಿಮನಿ, ಕಿರಣ್, ವೀರೇಶ್ ಆಚಾರ್, ನಲ್ಲಿ ಮಂಜಣ್ಣ, ರಾಜು ಐರಣಿ, ಭರತ್ ಶೆಟ್ಟಿ, ಶಾಂತರಾಜ್, ಆದಿತ್ಯ, ಚೇತನ್, ಬೆಣ್ಣಿ ಸಿದ್ದಪ್ಪ ಹಾಗೂ ಇನ್ನಿತರರಿದ್ದರು.