ಸಂತ ಸೇವಾಲಾಲರ ಆದರ್ಶಗಳನ್ನು ಪಾಲಿಸಲು ಕರೆ

ಜಗಳೂರಿನ ಬಂಜಾರ ಸಮಾಜದ ಕಾರ್ಯಕ್ರಮದಲ್ಲಿ ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ಫೆ.13- ಸಂತ ಸೇವಾಲಾಲ್‌ ಮಹಾರಾಜ್‌ ಅವರು ಒಂದು ಸಮುದಾಯಕ್ಕೆ ಸೀಮಿತವಾಗದೆ ದೇಶಕ್ಕಾಗಿ ಜೀವನ ಮುಡುಪಾಗಿಟ್ಟವರು. ಅವರ ಮಾರ್ಗದರ್ಶನದಡಿ ಸಾಗೋಣ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್‌.ವಿ. ರಾಮಚಂದ್ರ ತಿಳಿಸಿದರು.

ಪಟ್ಟಣದಲ್ಲಿ ಸಂತ ಸೇವಾಲಾಲ್‌ ಜಯಂ ತಿ ಅಂಗವಾಗಿ ಬಂಜಾರ ಸಮಾಜದಿಂದ ಹಮ್ಮಿ ಕೊಂಡಿದ್ದ ಬೃಹತ್‌ ಪಾದಯಾತ್ರೆ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂತ ಸೇವಾಲಾಲ್ ಜಯಂತಿ ಕಾರ್ಯ ಕ್ರಮ ಶಾಂತಿಯುತವಾಗಿ ಜರುಗಲಿ, ಮಹನೀ ಯರ ಆಶೀರ್ವಾದದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಸೌಹಾರ್ದಯುತ ವಾಗಿ ಎಲ್ಲರೂ ಸಮೃದ್ಧ ಜೀವನ ಸಾಗಿಸಲಿ ಎಂದರು.

ಯುವತಿಯರಿಂದ ನೃತ್ಯ : ಮೆರವಣಿಗೆಯಲ್ಲಿ ಲಂಬಾಣಿ ಸಂಸ್ಕೃತಿಯ ಉಡುಗೆ ಧರಿಸಿ ತಲೆ ಮೇಲೆ ಭತ್ತದ ಸಸಿಯ ಬುಟ್ಟಿ (ತೀಜ್) ಹೊತ್ತ ಯುವತಿಯರು ದಾರಿಯುದ್ದಕ್ಕೂ ವಿಶಿಷ್ಠ ಲಂಬಾಣಿ ನೃತ್ಯದಲ್ಲಿ ತೊಡಗಿದ್ದು ಎಲ್ಲರ ಗಮನ ಸೆಳೆಯಿತು. ಮಾಲಾಧಾರಿಗಳು ಕೇಸರಿ ಶಾಲು, ಪೇಟ ಧರಿಸಿ ಸಂತ ಸೇವಾಲಾಲ್‌ ಅವರ ಘೋಷಣೆ ಕೂಗುತ್ತಾ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದ್ದು ವಿಶೇಷವಾಗಿ ನೋಡುಗರ ಕಣ್ಮನ ಸೆಳೆಯಿತು.

ಮೆರವಣಿಗೆಯಲ್ಲಿ ಮಾಜಿ ಶಾಸಕ ಎಚ್‌.ಪಿ. ರಾಜೇಶ್‌, ಜಿ.ಪಂ. ಅಧ್ಯಕ್ಷ ಶಾಂತಕುಮಾರಿ, ಪ.ಪಂ. ಅಧ್ಯಕ್ಷ ಆರ್‌. ತಿಪ್ಪೇಸ್ವಾಮಿ, ಸದಸ್ಯ ನವೀನ್‌ಕುಮಾರ್, ತಾ.ಪಂ. ಸದಸ್ಯ ಶಂಕರ ನಾಯ್ಕ, ಮುಖಂಡರಾದ ಕೆ.ಪಿ. ಪಾಲಯ್ಯ, ಚಿಕ್ಕಮ್ಮನಹಳ್ಳಿ ದೇವೇಂದ್ರಪ್ಪ, ಸುರೇಶ್‌ ನಾಯ್ಕ, ಪುರುಷೋ ತ್ತಮನಾಯ್ಕ, ಉಮೇಶ್‌ನಾಯ್ಕ, ಅಣ್ಣಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!