ದಾವಣಗೆರೆ, ಜು.4- ಶ್ರೀಮತಿ ದ್ಯಾಮಮ್ಮ ಲಕ್ಷ್ಮಪ್ಪ ಯಕ್ಕನಹಳ್ಳಿ ಇವರ ಜ್ಞಾಪಕಾರ್ಥವಾಗಿ ನಿವೃತ್ತ ಇಂಜಿನಿಯರ್ ಎಸ್.ಎಲ್.ಆನಂದಪ್ಪ ಅವರು ನಗರದ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಕುರುಬ ಸಮಾಜ ಬಾಂಧವರಿಗೆ ದಿನಸಿ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಎನ್.ಜಿ.ನಿಂಗಣ್ಣ, ಕುರುಬ ಸಮಾಜದ ಹಿರಿಯ ಮುಖಂಡರುಗಳಾದ ಬಿ.ಎಚ್.ಪರಶುರಾಮಪ್ಪ, ಬಿ.ಷಣ್ಮುಖಪ್ಪ, ಚೌಡಪ್ಪ, ಕನಕ ಬ್ಯಾಂಕ್ ಮಾಜಿ ಅಧ್ಯಕ್ಷ ಹೆಚ್.ಜಿ.ನಿಂಗಪ್ಪ, ಪೂಜಾ ಹೋಟೆಲ್ ಮಾಲೀಕ ಎಂ.ಬಸಪ್ಪ, ಗೌಡರ ಜಯದೇವಪ್ಪ ಜವಳಿ ವರ್ತಕ ಪ್ರಕಾಶ್ ಗೌಡ್ರು, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು, ರೈತ ಮುಖಂಡ ಹೆಚ್.ಆರ್.ಲಿಂಗರಾಜ್ ಶಾಮನೂರು, ಯಾದವ ಸಮಾಜದ ಮುಖಂಡ ಶ್ರೀನಿವಾಸ್, ನೇಕಾರ ಸಮಾಜದ ಮುಖಂಡ ಶಂಕರ್ ಗಡದ್, ಅಕ್ಬರ್, ರೇವಣಪ್ಪ ವೇಟ್ ಲಿಫ್ಟರ್, ಅಡಾಣಿ ಸಿದ್ದಪ್ಪ, ನಾಗರಾಜ್ ರಾವ್ ಶಾನಭೋಗ್, ಶಶಿಧರ್ ಬಿಜೆಪಿ ಮುಖಂಡರು, ರವೀಂದ್ರಜೀ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರು, ಬಸಣ್ಣ, ಆರ್.ಪ್ರತಾಪ್, ವಕ್ತಾವರ ಸಿಂಗ್, ಭಾರತೀಯ ಜೈನ್ ಸಂಘದ ರಾಕೇಶ್ ಜೈನ್, ಮರಾಠ ಸಮಾಜದ ಮುಖಂಡ ರತ್ನಾಕರ್ ಬಗಲಿ, ಆರೆಸ್ಸೆಸ್ ಮುಖಂಡ ಮಂಜಣ್ಣ ಗಾಂಧಿನಗರ, ತ್ಯಾವಣಗಿ ಸಿನಿಮಾ ಬಸವರಾಜ್, ಕನಕ ಯುವ ಸೇನೆ ಜಿಲ್ಲಾ ಉಪಾಧ್ಯಕ್ಷ ಎಂ.ಮನು ಉಪಸ್ಥಿತರಿದ್ದರು.