ದಾವಣಗೆರೆ, ಜು.4- ಮಹಾನಗರ ಪಾಲಿಕೆಯ 33ನೇ ವಾರ್ಡ್‌ನ ಜಯನಗರ `ಎ’ ಬ್ಲಾಕ್ ಟಿ.ವಿ. ಸ್ಟೇಷನ್ ಕೆರೆ ಹಿಂಭಾಗದ ರಸ್ತೆಯಲ್ಲಿ ಪಿ.ಎನ್.ಜಯಕುಮಾರ್ ಅವರ ಮನೆಯಿಂದ ಬಿ.ಹೆಚ್.ನಟರಾಜ್ ಅವರ ಮನೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್ ಅವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್, ಉಪ ಮಹಾಪೌರರಾದ ಶಿಲ್ಪಾ ಜಯಪ್ರಕಾಶ್ ಹಾಗೂ ಪಾಲಿಕೆ ಸದಸ್ಯ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಬಿ.ದೇವೇಂದ್ರಪ್ಪ, ಪಿ.ಎಸ್.ಜಯಕುಮಾರ್,
ಕೆ.ಸಿ.ಲೋಕೇಶ್, ತಿಪ್ಪೇಸ್ವಾಮಿ, ಪ್ರವೀಣ್ ಬಾಣತ್, ಕಲಮರಹಳ್ಳಿ, ಲಕ್ಷ್ಮಣ ನಾಯಕ, ಓಂಕಾರಯ್ಯ ಹಾಗೂ ಗುತ್ತಿಗೆದಾರ ತಮ್ಮಣ್ಣ ಉಪಸ್ಥಿತರಿದ್ದರು.