ಕೂಡ್ಲಿಗಿ, ಜು.4- ತಾಲ್ಲೂಕಿನ ಕಾನಾಹೊಸಹಳ್ಳಿ ಕೆ.ಎಂ.ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶನಿವಾರ ಕೋವಿಡ್ ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಕೆ.ಎಂ. ಶಶಿಧರ್ ಗಿಡಕ್ಕೆ ನೀರು ಹಾಕುವುದರ ಮುಖಾಂತರ ಚಾಲನೆ ನೀಡಿದರು. ಆರೋಗ್ಯ ಇಲಾಖೆಯ ರಾಘವ ರೆಡ್ಡಿ, ಕೃಷ್ಣ ಮಹೇಂದ್ರಕರ್, ಸವಿತಾ, ಸುಧಾ, ಭಾರತಿ, ಆಶಾ ಕಾರ್ಯಕರ್ತೆ ಶಶಿಕಲಾ, ಕಾಲೇಜಿನ ಸಿಬ್ಬಂದಿಗಳಾದ ಸುದರ್ಶನ, ವಿಜಯಕುಮಾರ್, ದಂಡೆಪ್ಪ ಸೇರಿದಂತೆ ಮತ್ತಿತರರಿದ್ದರು.
January 18, 2025