ದಾವಣಗೆರೆ, ಜು.2- ಕೊರೊನಾ ಅಲೆಗಳಿಂದ ಬ್ಯೂಟಿಪಾರ್ಲರ್ ಉದ್ಯಮದಲ್ಲಿ ಕಷ್ಟ – ನಷ್ಟಗಳು, ಆರ್ಥಿಕ ತೊಂದರೆಗಳಾಗುತ್ತಿದ್ದು, ಸರ್ಕಾರ ದಿಂದ ಸಹಾಯದ ಪ್ಯಾಕೇಜ್ ಘೋಷಿಸುವಂತೆ ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀಮತಿ ಕವಿತಾ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಗೀತಾ ರೆಡ್ಡಿ, ಪದ್ಮಾವತಿ, ಆಶಾ ಕೃಷ್ಣಮೂರ್ತಿ, ಆಶಾ ಶಾಮನೂರು, ಶೈಲಾ, ಲಕ್ಷ್ಮಿ, ಸವಿತಾ, ಸುಪ್ರಭಾ, ಗೀತಾ ಮತ್ತಿತರಿದ್ದರು.
January 4, 2025