ದಾವಣಗೆರೆ, ಜು.2- ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್.ಟಿ.ಮೋರ್ಚಾ ವತಿಯಿಂದ ಡಾ.ಶ್ಯಾಮ್ ಸುಂದರ್ ಮುಖರ್ಜಿ ಅವರ ಸ್ಮರಣಾರ್ಥ ವೃಕ್ಷಾರೋಹಣ ಕಾರ್ಯಕ್ರಮದಡಿಯಲ್ಲಿ ಆವರಗೆರೆ ಗೋಶಾಲೆಯಲ್ಲಿ ಸಸಿ ನೆಟ್ಟು ಪರಿಸರ ಪ್ರೇಮ ಮೆರೆಯಲಾಯಿತು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಉತ್ತರ ವಿಧಾನಸಭಾ ಕ್ಷೇತ್ರದ ಎಸ್.ಟಿ. ಮೋರ್ಚಾ ಅಧ್ಯಕ್ಷ ಗುಮ್ಮನೂರು ಶ್ರೀನಿವಾಸ್, ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಬಸರಾಜಯ್ಯ , ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಗೇಶ್ ನಿಟುವಳ್ಳಿ, ಎಸ್ಸಿ ಮೋರ್ಚಾ ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ರವಿ ನಾಯ್ಕ, ರಾಜು ಶಾಮನೂರು, ಸವಿತಾ ರವಿ ಕುಮಾರ್, ಜ್ಯೋತಿ, ಸುರೇಶ್ ಗೋಶಾಲೆ ಮತ್ತಿತರರು ಭಾಗವಹಿಸಿದ್ದರು.