ದಾವಣಗೆರೆ, ಜು.2- ಶುಭಲಕ್ಷ್ಮಿ ಮಹಿಳಾ ಮಂಡಳಿಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಗರದ ಪಿಸಾಳೆ ಕಾಂಪೌಂಡ್ ನಲ್ಲಿರುವ ಶ್ರೀ ಗುಳ್ಳಮ್ಮ ದೇವಸ್ಥಾನದಲ್ಲಿ ಮಂಡಳಿಯ ಸದಸ್ಯೆಯರಿಂದ ಬನ್ನಿ ಗಿಡ ಹಾಗೂ ಸಸಿ ನೆಟ್ಟು ಪರಿಸರ ಸಂರಕ್ಷಣೆ ಸಂದೇಶ ಸಾರಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ನಾಗರಾಜ್ ರಾವ್ ಪಿಸಾಳೆ, ಶುಭಲಕ್ಷ್ಮಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ವಸಂತ ಬಾಯಿ, ಅಧ್ಯಕ್ಷೆ ಪದ್ಮಜಾ ರಾವ್, ಉಪಾಧ್ಯಕ್ಷೆ ಅಂಬಿಕಾ ಬಾಯಿ, ಪ್ರಧಾನ ಕಾರ್ಯದರ್ಶಿ ದೀಪ, ಖಜಾಂಚಿ ಸರಳ, ನಂದಿನಿ, ಅಕ್ಕಮಹಾದೇವಿ ಸೇರಿದಂತೆ ಇತರರಿದ್ದರು.