ಲೆಕ್ಕಪರಿಶೋಧಕ, ವೈದ್ಯರ ದಿನಾಚರಣೆ

ದಾವಣಗೆರೆ, ಜು.1 – ಇಂದಿನ ದೇಶದ ಆರ್ಥಿಕ ಮತ್ತು ಆರೋಗ್ಯ ಕ್ಷೇತ್ರದ ಸಂಕಷ್ಟ ಸಮಯದಲ್ಲಿ ದೇಶವನ್ನು ಉಳಿಸಿ, ಬೆಳೆಸುವಲ್ಲಿ ವೈದ್ಯರು ಮತ್ತು ಲೆಕ್ಕಪರಿಶೋಧಕರ ಕೆಲಸ ಮಹತ್ವ ದ್ದಾಗಿದ್ದು, ಈ ನಿಟ್ಟಿನಲ್ಲಿ ಎರಡೂ ಕ್ಷೇತ್ರದವರು ಹೆಚ್ಚಿನ ಜವಾಬ್ದಾರಿಯುತ ಕೆಲಸ ಮಾಡಬೇಕಾಗಿದೆ ಎಂದು ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರು ಕರೆ ನೀಡಿದ್ದಾರೆ.

ವೈದ್ಯರ ಮತ್ತು ಲೆಕ್ಕಪರಿಶೋಧಕರ ದಿನದ ಅಂಗವಾಗಿ ನಗರದ ರೋಟರಿ ಬಾಲ ಭವನದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ವೈದ್ಯರು ಮತ್ತು ಲೆಕ್ಕಪರಿಶೋಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ದೇಶದ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾ ಗಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಕಳೆದ 15 ತಿಂಗಳಿನಿಂದ ವೈದ್ಯರು
ಹಗಲು, ರಾತ್ರಿಯೆನ್ನದೇ ಕಾರ್ಯ ನಿರ್ವಹಿಸುತ್ತಿ ದ್ದಾರೆ. 

ಲೆಕ್ಕಪರಿಶೋಧಕರು ಸಹ ಕಾರ್ಯ ನಿರ್ವಹಿಸುತ್ತಿದ್ದು, ದೇಶ ಆರೋಗ್ಯದ ಜೊತೆ ಆರ್ಥಿಕ ಸಂಕಷ್ಟದಿಂದಲೂ ಹೊರಬರಬೇಕಾಗಿದೆ ಎಂದರು.

ಲೆಕ್ಕಪರಿಶೋಧಕರೂ ಆದ ಉದ್ಯಮಿ ಅಥಣಿ ವೀರಣ್ಣ ಅವರು ಮಾತನಾಡಿ, ಶಾಮನೂರು ಶಿವಶಂಕರಪ್ಪ ಮತ್ತು  ಶಾಮನೂರು ಮಲ್ಲಿಕಾರ್ಜುನ್ ಅವರ ದೂರದೃಷ್ಟಿಯಿಂದ ದಾವಣಗೆರೆ ಜನರ ಜೀವ ಉಳಿಸುವ ಕೆಲಸ ನಡೆಯುತ್ತಿದೆ. ಅನೇಕ ಅಡೆ-ತಡೆಗಳು ಬಂದರೂ ಸಹ ಅವುಗಳನ್ನು ಎದುರಿಸಿ ಜನತೆಗೆ ಲಸಿಕೆ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಇದೇ ವೇಳೆ ಹಿರಿಯ ಲೆಕ್ಕಪರಿಶೋಧಕ ಅಥಣಿ ವೀರಣ್ಣ ಹಾಗೂ ವೈದ್ಯರ ಪರವಾಗಿ ಜಜಮು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶು ಪಾಲ ಡಾ|| ಎಸ್.ಬಿ.ಮುರುಗೇಶ್, ಡಾ|| ವಾಮನ್ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ದಿನೇಶ್ ಕೆ. ಶೆಟ್ಟಿ, ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!