ದಾವಣಗೆರೆ, ಜು.1- ಕಮ್ಯು ನಿಟಿ ಹೆಲ್ತ್ ವಿಷಯದಲ್ಲಿ ಸದಾ ಮುಂದಿರುವ ರೋಟರಿ ಕ್ಲಬ್ ದಾವಣಗೆರೆಯಲ್ಲಿ ಮ್ಯಾಮೋ ಗ್ರಫಿ ಘಟಕ ಸ್ಥಾಪಿಸುತ್ತಿರುವುದು ಶ್ಲ್ಯಾಘನೀಯ ಎಂದು ಡಾ. ಎಲ್. ನಾಗರಾಜ್ ತಿಳಿಸಿದರು.
ರೋಟರಿ ಫೌಂಡೇಷನ್ ಸಹಕಾರದಿಂದ ನಗರದ ಸುಕ್ಷೇಮ ಆಸ್ಪತ್ರೆಯಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ತಪಾಸಣಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂಸ್ಥೆ ಮುಂದೆಯೂ ಆರೋಗ್ಯ ಕುರಿತ ಚಟುವಟಿಕೆಗಳನ್ನು ಮಾಡಲಿ ಎಂದು ಅವರು ಆಶಿಸಿದರು.
ರೋಟರಿ ಗವರ್ನರ್ ಚಿನ್ನಪ್ಪ ರೆಡ್ಡಿ ಮಾತನಾಡಿ, ರೋಟರಿ ಸಂಸ್ಥೆಯ ಮುಖ್ಯ ಉದ್ದೇಶಗಳಲ್ಲಿ ಸಾರ್ವಜನಿಕ ಆರೋಗ್ಯದ ಕಾಳಜಿಯೂ ಒಂದಾಗಿದ್ದು, ಇನ್ನೂ ಹೆಚ್ಚಿನ ಕಾರ್ಯಗಳನ್ನು ಸಂಸ್ಥೆ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಸುಕ್ಷೇಮ ಆಸ್ಪತ್ರೆಯ ಮುಖ್ಯಸ್ಥ ಡಾ. ಶ್ರೀ ಶೈಲ ಬ್ಯಾಡಗಿ ಮಾತನಾಡಿ, ಕ್ಯಾನ್ಸರ್ ಎಂದರೆ ಯಾರೂ ಮೊದಲಿನ ಹಾಗೆ ಹೆದರಬೇಕಿಲ್ಲ. ಅದಕ್ಕೆ ತಕ್ಕ ಚಿಕಿತ್ಸಾ ಸೌಲಭ್ಯಗಳು ಈಗ ದೊರೆಯುತ್ತಿವೆ. ಮುಂಜಾಗ್ರತೆಯಿಂದ ತಪಾಸಣೆ ಮಾಡಿಸಿದರೆ ಅದರ ಚಿಕಿತ್ಸೆ ಹೆಚ್ಚು ಅನುಕೂಲಕರ. ಸಾರ್ವಜನಿಕರು ರೋಟರಿ ಆಯೋಜಿಸುವ ತಪಾಸಣಾ ಶಿಬಿರಗಳ ಅನುಕೂಲ ಪಡೆಯಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್.ಟಿ. ಮೃತ್ಯುಂ ಜಯ, ರೋಟರಿ ಆಯೋಜಿಸುವ ತಪಾಸಣಾ ಶಿಬಿರಗಳಿಗೆ, ಜಾಗೃತಿ ಅಭಿಯಾನಗಳಿಗೆ ಆರೋಗ್ಯ ಇಲಾಖೆಯು ಸಹಕರಿಸಿ ಪ್ರೋತ್ಸಾಹಿ ಸಬೇಕೆಂದು ಮನವಿ ಮಾಡಿದರು.
ರೋಟರಿ ಹಿರಿಯ ಸದಸ್ಯರುಗಳಾದ ಎಸ್.ಕೆ. ವೀರಣ್ಣ, ಆರ್.ಎಸ್. ನಾರಾಯಣ ಸ್ವಾಮಿ, ಮಧುಪ್ರಸಾದ್, ರವೀಂದ್ರ, ನಯನ್ ಪಾಟೀಲ್, ಭಾವೀ ಗವರ್ನರ್ ತಿರುಪತಿನಾಯ್ಡು, ಗ್ರಾಂಟ್ ಕಮಿಟಿಯ ಛೇರ್ಮನ್ ಪಿ.ಬಿ. ಪ್ರಕಾಶ್, ಸದಸ್ಯರಾದ ಡಾ.ವಿ ಎಲ್ ಜಯಸಿಂಹ, ರೋಟರಿ ಕಾರ್ಯದರ್ಶಿ ಅಂದನೂರು ಆನಂದ್, ಖಜಾಂಚಿ ಜಗದೀಶ್ ಬೇತೂರ್ ಹಾಗು ಇನ್ನಿತರೆ ಸದಸ್ಯರು ಉಪಸ್ಥಿತರಿದ್ದರು. ಕ್ಯಾನ್ಸರ್ ತಜ್ಞ ಡಾ. ಸುನೀಲ್ ಬ್ಯಾಡಗಿ ವಂದಿಸಿದರು.