ದಾವಣಗೆರೆ, ಜೂ.30- ಸೇವೆಯಿಂದ ಇಂದು ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ಬೀಳ್ಕೊಟ್ಟರು.
ಬಸವನಗರ ಪಿಎಸ್ಐ ಪ್ರಕಾಶ್, ಸಂತೇಬೆನ್ನೂರು ಠಾಣೆಯ ಎಎಸ್ಐ ರಾಜಪ್ಪ ಮತ್ತು ಸುರೇಂದ್ರನಾಯ್ಕ್, ಜಗಳೂರು ಠಾಣೆಯ ಎಎಸ್ಐ ವೆಂಕಟ ಶಿವರೆಡ್ಡಿ, ದಕ್ಷಿಣ ಸಂಚಾರಿ ಠಾಣೆಯ ಎಎಸ್ಐ ಪಂಪಾಪತಿ, ಹೊನ್ನಾಳಿ ಠಾಣೆಯ ಎಎಸ್ಐ ಮುಸ್ತಫಾ ಅವರುಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಭಿನಂದಿಸಿ, ನಿವೃತ್ತಿ ಜೀವನಕ್ಕೆ ಶುಭ ಕೋರಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿ ನಾಗೇಶ್ ಮತ್ತು ಸಿಬ್ಬಂದಿಗಳು ಇದ್ದರು.