ಖಾಲಿ ಜಾಗಕ್ಕೆ ಮುಗಿ ಬಿದ್ದ ಜನ

ದಾವಣಗೆರೆ, ಜ.31- ಪುಕ್ಕಟ್ಟೆಯಾಗಿ ಜಾಗ ಸಿಗುತ್ತೆಂಬ ಸುಳ್ಳು ಸುದ್ದಿಯನ್ನೇ ನಿಜವೆಂದು ನಂಬಿ ಜನರು ಖಾಲಿ ಜಾಗದಲ್ಲಿ ಸಿಕ್ಕಷ್ಟು ಜಾಗಕ್ಕೆ ಗೂಟ ನೆಟ್ಟು ಬೇಲಿ ಹಾಕಲು ಮುಗಿ ಬಿದ್ದಿದ್ದ ಘಟನೆ ಚನ್ನಗಿರಿ ತಾಲ್ಲೂಕಿನ ಚಿಕ್ಕೂಲಿಕೆರೆ ಗ್ರಾಮದ ಬಳಿ ನಡೆದಿದೆ. 

ಚಿಕ್ಕೂಲಿಕೆರೆ ಸರ್ವೆ ನಂ 91, ಲಕ್ಷ್ಮಿಸಾಗರದ ಸರ್ವೇ ನಂ 15ರಲ್ಲಿ ಸುಮಾರು 150 ಎಕರೆ ಪ್ರದೇಶ ದಲ್ಲಿ ಜನರಿಗೆ ಉಚಿತವಾಗಿ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುರಸಭೆ ಸದಸ್ಯರು ಮನೆ ಕಟ್ಟಲು ಹೇಳಿದ್ದಾರೆ ಎಂಬ ಸುದ್ದಿಗೆ ಜನ ಗುಂಪು ಗುಂಪಾಗಿ ಬಂದಿದ್ದರು. ಖಾಲಿ ಜಾಗಕ್ಕೆ ಜಾಗ ನಂದು ಅಂತ ಸಲಕಿ ಗುದ್ದಲಿ ತಂದು ಸಿಕ್ಕಷ್ಟು ಜಾಗಕ್ಕೆ ಗೂಟ ನೆಟ್ಟ ಬೇಲಿ ಹಾಕಲು ಮುಂದಾದರು. 

ಹೀಗೆ ಬೇಲಿ ಹಾಕಿ ಮನೆ ಕಟ್ಟಲು ಮುಗಿ ಬಿದ್ದಿದ್ದ ಜನರನ್ನು ತಡೆದ ಅರಣ್ಯ ಇಲಾಖೆ ಸಿಬ್ಬಂದಿ ಇಲ್ಲಿ ಜಮೀನು ಹಂಚಿಕೆ ಮಾಡುತ್ತಿಲ್ಲ ಎಂದು ಮನವರಿಕೆ ಮಾಡಿ ಎಲ್ಲರನ್ನೂ ವಾಪಸ್ ಕಳುಹಿಸಿದ್ದಾರೆ. ಉಚಿತ ನಿವೇಶನ ಕೊಡುತ್ತಾರೆಂದು ಓಡೋಡಿ ಹೋಗಿದ್ದ ಜನರು ನಿರಾಶೆಗೊಂಡು ಮನೆಯತ್ತ ಹೆಜ್ಜೆ ಹಾಕಿದ್ದಾರೆ. 

error: Content is protected !!