ಪ್ರತಿಯೊಬ್ಬರಿಗೂ ಸೂರು : ಎರಡು ಕೋಟಿ ಮನೆಗಳಿಗೆ ಪ್ರಸ್ತಾವನೆ

ಹರಪನಹಳ್ಳಿ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ

ಹರಪನಹಳ್ಳಿ, ಜ.27 – ಪ್ರತಿಯೊಬ್ಬ ರಿಗೂ ಸೂರು ಕಲ್ಪಿಸುವ ಸಲುವಾಗಿ ಮೊದಲನೇ ಹಂತದಲ್ಲಿ ದೇಶದಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸಲು ಮುಂದಾಗಿದ್ದು, ರಾಜ್ಯಕ್ಕೆ ಸಿಂಹಪಾಲು ಪಡೆದುಕೊಂಡಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ತಾಲ್ಲೂಕಿನ ಗೌರಿಹಳ್ಳಿ ಗ್ರಾಮದಲ್ಲಿ 13.55 ಕೋಟಿ ವೆಚ್ಚದಲ್ಲಿ 17.82 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಹೊಳಲು ರಸ್ತೆಯಿಂದ ಗೌರಿಹಳ್ಳಿ, ಅಲಮರಸಿಕೇರಿ ಮಾಡ್ಲಿಗೇರಿ, ಕನ್ನನಾಯಕನಹಳ್ಳಿ ಸೇರಿದಂತೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಒಟ್ಟು 17.82 ಕಿ.ಮೀ ಉದ್ದದ ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮಗಳ ಅಭಿವೃದ್ದಿಗೆ ಹಾಗೂ ಪರಿಶಿಷ್ಟ ಜಾತಿ ಪಂಗಡಗಳ ಕಾಲೋನಿಗಳಿಗೆ ಸಿಸಿ ರಸ್ತೆ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಂದಿದ್ದು, ಹಂತ ಹಂತವಾಗಿ ಅಭಿವೃದ್ದಿ ಮಾಡಲಾಗುವುದು ಎಂದವರು ಹೇಳಿದರು.

ಕೋವಿಡ್ ವ್ಯಾಕ್ಸಿನ್ ರಾಜ್ಯದಲ್ಲಿ 3 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಇದನ್ನು ವಿರೋಧ ಪಕ್ಷದವರ ಮಾಡುವ ಅಪಪ್ರ ಚಾರಕ್ಕೆ ಕಿವಿಗೊಡದೇ ಪ್ರತಿಯೊಬ್ಬರು ಲಸಿಕೆ ಯನ್ನು ಪಡೆದುಕೊಳ್ಳಲು ಮುಂದಾಗಿ ರಸ್ತೆ ಕಾಮಗಾರಿ ಕಳಪೆ ಕಂಡುಬಂದಲ್ಲಿ ಗ್ರಾಮಸ್ಥರು ಉದಾಸೀನತೆ ತೊರದೆ ಕೂಡಲೇ ಶಾಸಕ ಮತ್ತು ಸಂಸದರ ಗಮನಕ್ಕೆ ತಂದಲ್ಲಿ, ನಾವೇ ನಿಂತಿದ್ದು, ಗುಣಮಟ್ಟದ ಕಾಮಗಾರಿ ನಿರ್ಮಾಣ ಮಾಡುವವರೆಗೂ ತಡೆಹಿಡಿಯು ತ್ತೇವೆ ಎಂದು ಸಿದ್ದೇಶ್ವರ ಅವರು ತಿಳಿಸಿದರು.

ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ ಕೆ.ಕೆ.ಆರ್.ಡಿ ಯೋಜನೆಯಡಿ 17ಕೋಟಿ ಅನುದಾನ ಮಂಜೂರಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅಂಗನವಾಡಿ ಕೇಂದ್ರ ಶಾಲಾ ಶೌಚಾಲ ಯಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಅನೇಕ ಕಾಮಗಾರಿಗಳನ್ನು ನಿರ್ಮಾಣ ಮಾಡಲಾಗಿದೆ ತಾಲ್ಲೂಕಿನ 110 ಗ್ರಾಮಗಳಿಗೆ ಕೆರೆ ನೀರು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ, ನೂತನ ಗ್ರಾಮ ಪಂಚಾಯ್ತಿ ಸದಸ್ಯರುಗಳು ನರೇಗಾ ಯೋಜನೆಯಡಿ ಕೆರೆಗಳನ್ನು ಹೂಳೆತ್ತಿಸಲು ಮುಂದಾದರೆ, ನೀರು ತುಂಬಿಸಲು ಅನುಕೂವಾಗುತ್ತದೆ, ಹೆಚ್ಚಿನದಾಗಿ ಅನುದಾನ ತರಲು ಸಿದ್ದನಿದ್ದೇನೆ ಎಂದ ಅವರು ತಾಲ್ಲೂಕಿನಲ್ಲಿ ಜಲಜೀವನ ಯೋಜನೆ ಟೆಂಡರ್ ಹಂತದಲ್ಲಿದೆ, ದೇವಸ್ಥಾನಗಳ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿ ಗಳ ಬಳಿ ಬೇಡಿಕೆ ಇಟ್ಟಿದ್ದೇನೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಎಲ್. ಮಂಜನಾಯ್ಕ್, ಪುರಸಭೆ ಅಧ್ಯಕ್ಷ ಮಂಜುನಾಥ್ ಇಜಂತಕರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್. ಲೋಕೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ವೈ.ಬಸಪ್ಪ, ನಾಗರಾಜ್, ಪುರಸಭೆ ಸದಸ್ಯ ಎಂ.ಕೆ. ಜಾವೀದ್, ಕಿರಣ್ ಕುಮಾರ್, ಮುಖಂಡರಾದ ಎಂ.ಪಿ ನಾಯ್ಕ್, ಶಿವಾನಂದ, ಗೌಳಿ ಕೊಟ್ರೇಶ್, ತಿಪ್ಪೇಶ್, ರವಿ, ಗೌಳಿ ಬಸವರಾಜ್, ಮತ್ತಿತರರು ಉಪಸ್ಥಿತರಿದ್ದರು.

error: Content is protected !!