ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ ಅಭಿಮತ
ಕೂಡ್ಲಿಗಿ, ಜ. 27- ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಅಖಂಡತೆ, ಅಸ್ಮಿತೆ ಹಾಗೂ ಸಾರ್ವಭೌಮತ್ವಕ್ಕೆ ಎಲ್ಲರೂ ಬದ್ದರಾಗಬೇಕಿದೆ ಎಂದು ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಮಹದೇವ ಮೈಲಾರ ಕ್ರೀಡಾಂ ಗಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಮಾತನಾಡುತ್ತಿದ್ದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಸಂವಿಧಾನ ರಚನೆ ಬಹುಮುಖ್ಯ ಪಾತ್ರ ವಹಿ ಸಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ರಾಜೇಂದ್ರ ಪ್ರಸಾದ್ ಮುಂತಾದವರು ಲಿಖಿತ ಸಂವಿಧಾನ ರಚನೆ ಮಾಡುವುದರ ಮೂಲಕ ಜಗತ್ತಿನ ಗಮನ ಸೆಳೆದರು. ಇಂದು ಸಂವಿಧಾನ, ಪ್ರಜಾಪ್ರಭುತ್ವದ ವ್ಯವಸ್ಥೆ ಗಟ್ಟಿಗೊಳ್ಳ ಬೇಕಾದರೆ ಮತೀಯ ಶಕ್ತಿಗಳಿಂದ ಇಡೀ ದೇಶದ ಅಖಂಡತೆಯನ್ನು ಉಳಿಸಿಕೊಂಡು ಹೋಗ ಬೇಕಿದೆ. ಈ ದೇಶದ ಗಣತಂತ್ರ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಬೇಕಿದೆ ಎಂದರು.
ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತನಾಡಿ, ಇಂದು ಕೆಲವು ಶಕ್ತಿಗಳು ಜಾತಿ, ಧರ್ಮಗಳ ಹೆಸರಿನಲ್ಲಿ ದೇಶದ ಅಖಂಡತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದು, ದೇಶಪ್ರೇಮ, ದೇಶ ಭಕ್ತಿ ಬೆಳೆಸಿಕೊಳ್ಳುವ ಮೂಲಕ ಯುವಪೀಳಿಗೆಗೆ ಭಾರತೀಯತೆ ಮಂತ್ರವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಅಮಿನುದ್ದೀನ್ ಬಾಷಾ, ವೀರೇಶ್, ಮಹಾಂತೇಶ್, ಮಹೇಶ್ ಸೇರಿದಂತೆ ಕೃಷಿ, ಆರೋಗ್ಯ ಇತರೆ ರಂಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷರಾದ ಕೆ.ನಾಗ ರತ್ನಮ್ಮ ನಿಂಗಪ್ಪ, ಪ.ಪಂ.ಅಧ್ಯಕ್ಷರಾದ ಕೆ.ಶಾರದಾಬಾಯಿ, ಉಪಾಧ್ಯಕ್ಷರಾದ ಊರಮ್ಮ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಂ.ಬಸಣ್ಣ, ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಶಿವರಾಜ, ತಾ.ಪಂ. ಸದಸ್ಯರಾದ ಜಿ.ಪಾಪನಾಯಕ, ಕೆ.ಚಿನ್ನಾಪ್ರಪ್ಪ, ಹಂಪಜ್ಜರ ಕೊಟ್ರೇಶ್, ಪ.ಪಂ.ಸದಸ್ಯ ರಾದ ರೇಣುಕಾ ಎಸ್.ದುರುಗೇಶ್, ಕೆ.ಶಿವಪ್ಪ ನಾಯಕ, ಡಿ.ವೈ.ಎಸ್.ಪಿ. ಹರೀಶ್ ರೆಡ್ಡಿ, ಸಿಪಿಐ ವಸಂತ ವಿ.ಅಸೋದೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ವಾಮದೇವ, ಉಪನ್ಯಾಸಕ
ಸುಭಾ ಶ್ಚಂದ್ರಬೋಸ್ ಮುಂತಾದವರು ಉಪಸ್ಥಿತರಿದ್ದರು.