ಮುಂದಿನ ಪೀಳಿಗೆಗಾಗಿ ನಾವು ಪರಿಸರ ಉಳಿಸೋಣ

ಹರಪನಹಳ್ಳಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಜಿ.ಕರುಣಾಕರ ರೆಡ್ಡಿ 

ಹರಪನಹಳ್ಳಿ, ಜ.26-  ದೇಶದಲ್ಲಿ ದಿನ ದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು,  ಪರಿಸರ ಉಳಿಸಲು ಅರಣ್ಯೀಕರಣ ಹಾಗೂ ನೀರನ್ನು ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಸಹಾಯ ಮಾಡುವ ಅಗತ್ಯತೆ ಇದೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಶಾಸಕನಾಗಿ ಬಂದ ಮೇಲೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಮನಗಂಡು ಆ ಗ್ರಾಮಗಳಿಗೆ ಬೋರ್‍ವೆಲ್ ಹಾಕಿಸಿದ್ದರಿಂದ ನೀರಿನ ಬವಣೆ ಕಡಿಮೆಯಾಗಿದೆ ಎಂದು ಹೇಳಿದರು.

ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿ ಸುವ ಕಾಮಗಾರಿ ಭರದಿಂದ ಸಾಗಿದೆ. ನೂತನ ವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರುಗಳು ಕೆರೆಗೆ ನೀರು ಬರುವುದಕ್ಕೂ ಮುನ್ನ ಕೆರೆಯಲ್ಲಿರುವ ಹೂಳು ತೆಗೆಸಿದರೆ ನೀರು ನಿಲ್ಲುತ್ತದೆ  ಎಂದು ಸಲಹೆ ನೀಡಿದರು.

ದೇಶದ ಸ್ವಾತಂತ್ರ್ಯ ಪಡೆಯಲು ಅನೇಕ ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಸರ್ವರಿಗೂ ನ್ಯಾಯ ಸಿಗುವ ನಿಟ್ಟಿನಲ್ಲಿ ಅಧಿಕಾರಿಗಳು ಗ್ರಾಮೀಣರ ಮನೆ ಬಾಗಿಲಿಗೆ ಸರ್ಕಾರದ ಸವಲತ್ತುಗಳನ್ನು ಮುಟ್ಟಿಸುವ ಕೆಲಸ ಮಾಡಲು ಶೀಘ್ರವೇ ಬರಲಿದ್ದಾರೆ ಎಂದರು.

ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ವಿ.ಕೆ. ಮಾತನಾಡಿ,  ದೇಶದ ಐಕತ್ಯೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವುದು ಸಂವಿಧಾನದ ಅಶಯವಾಗಿದ್ದು,  ಪ್ರತಿಯೊಬ್ಬರೂ  ಸಂವಿಧಾನದ ಅಶಯದಂತೆ ನಡೆದುಕೊಂಡರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದರು.

ತೆಲಗಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಶೀಲ ಕೆ.ಆರ್. ಮಾತನಾಡಿ, ವಿಶ್ವದಲ್ಲೆ ಅಗ್ರಗಣ್ಯ ರಾಷ್ಟವೆಂದರೆ ಅದು ವಿವಿಧತೆಯಲ್ಲಿ ಏಕತೆ ಕಾಣುವ ಭಾರತ ಎಂದರು. 

ಡಿವೈಎಸ್ಪಿ ವಿ.ಎಸ್ ಹಾಲುಮೂರ್ತಿ ರಾವ್, ಕಂಚಿಕೇರಿ ಜಿಲ್ಲಾ ಪಂಚಾಯಿತಿ ಸದಸ್ಯ  ಡಿ. ಸಿದ್ದಪ್ಪ, ತಹಶಿಲ್ದಾರ್ ನಂದೀಶ ಎಲ್.ಎಂ. ಮಾತನಾಡಿದರು. 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ  ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜಾನಾಯ್ಕ, ಪುರಸಭೆ ಅಧ್ಯಕ್ಷ ಮಂಜುನಾಥ್ ಇಜಂತಕರ್, ಉಪಾಧ್ಯಕ್ಷ ಎನ್. ಭೀಮವ್ವ ಸಣ್ಣಹಾಲಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ. ಘಟಕದ ಕಾರ್ಯದರ್ಶಿ ಆರ್. ಲೊಕೇಶ್,  ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗನಗೌಡ,  ಮುಖಂಡ ರಾದ ಎಂ.ಪಿ.ನಾಯ್ಕ,  ಆರ್.ಕರೇಗೌಡ, ಯಡಿಹಳ್ಳಿ ಶೇಖರಪ್ಪ, ಬಾಗಳಿ ಕೋಟ್ರೇಶಪ್ಪ, ಉಪನ್ಯಾಸಕ ಉಚ್ಚರಾಯಪ್ಪ, ಇ.ಓ. ಬಿ.ಎಲ್. ಈಶ್ವರ ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ, ಶಿಕ್ಷಣ ಸಂಯೋಜಕ ಗಿರಜ್ಜಿ ನಾಗರಾಜ, ಪುರಸಭೆ ಮುಖ್ಯಾಧಿಕಾರಿ ಬಿ.ಆರ್. ನಾಗರಾಜನಾಯ್ಕ, ಸಮಾಜ ಕಲ್ಯಾಣಧಿಕಾರಿ ಆನಂದ ಡೊಳ್ಳಿನ್ ಸೇರಿದಂತೆ ಇತರರಿದ್ದರು.

error: Content is protected !!