ಮುಂದಿನ ಚುನಾವಣೆಗೂ ಸ್ಪರ್ಧಿಸಿ ಗೆಲ್ಲುವೆ
ಕ್ಷೇತ್ರದಲ್ಲಿ ನಾನು ಮುಂದಿನ ಚುನಾವಣೆ ಸ್ಪರ್ಧೆಗಿಳಿಯುವುದಿಲ್ಲ ಎಂಬ ವದಂತಿಗಳು ಹಬ್ಬಿದ್ದು ಇದಕ್ಕೆ ಯಾರೂ ಕಿವಿಕೊಡಬಾರದು. ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ನಾನು ಏಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು? ಎಂದು ಪ್ರಶ್ನಿಸಿದ ಅವರು, ಜನತೆ ನನ್ನನ್ನು ಉನ್ನತ ಶಿಖರಕ್ಕೆ ಬೆಳೆಸಿದ್ದೀರಿ, ಮತದಾರರ ಆಶೀರ್ವಾದ ಇರುವತನಕ ಸ್ಪರ್ಧೆ ಮಾಡುತ್ತೇನೆ.
-ಎಸ್.ವಿ.ರಾಮಚಂದ್ರ, ಶಾಸಕರು, ಜಗಳೂರು.
ಜಗಳೂರು, ಜ.26- ಕೊರೊನಾ ಮಹಾಮಾರಿ ಸಮಸ್ಯೆ ಇದ್ದರೂ ಕ್ಷೇತ್ರದ ಪ್ರಗತಿಯಲ್ಲಿ ತೂಂದರೆಯಾಗಿಲ್ಲ. ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ ಅನುದಾನ ನೀಡಿದೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.
ಪಟ್ಟಣದ ಗುರುಭವನ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
57 ಕೆರೆ ತುಂಬಿಸುವ ಯೋಜನೆ ಪ್ರಗತಿಯ ಲ್ಲಿದೆ. ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಕ್ರಮ ವಾಗಿ ಜೂನ್-ಜುಲೈ 17, ಆಗಸ್ಟ್ – ಸೆಪ್ಟೆಂಬರ್ 17, ಡಿಸೆಂಬರ್ ಮಾಹೆಗಳಿಗೆ 23 ಕೆರೆಗಳಿಗೆ ನೀರು ಹರಿಸಿ ವರ್ಷದಂತ್ಯಕ್ಕೆ 57 ಕೆರೆಗಳಿಗೆ 3 ಹಂತಗಳಲ್ಲಿ ನೀರು ಭರ್ತಿಯಾಗಲಿವೆ ಎಂದರು.
ಜಿ.ಎಂ. ಸಿದ್ದೇಶ್ವರ ಅವರ ಸತತ ಪ್ರಯತ್ನದಿಂದ ಕೇಂದ್ರ ಅನುದಾನದಲ್ಲಿ 1200 ಕೋಟಿ ಅನುದಾನ ಮೀಸಲಿಟ್ಟು, ರಾಷ್ಟ್ರೀಯ ಯೋಜನೆಯನ್ನಾಗಿಸಿದೆ.
ನನ್ನ ಕನಸಿನ ಭದ್ರಾ ಮೇಲ್ದಂಡೆ ಯೋಜನೆಗೆ ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಯಡಿಯೂರಪ್ಪ ನವರ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ಏಪ್ರಿಲ್ ತಿಂಗಳಿಗೆ ಜಾಗತಿಕ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಮಾಹೆಯಲ್ಲಿ ಪ್ರಧಾನಿ ಮೋದಿಜಿ ಅವರನ್ನು ಆಹ್ವಾನಿಸಿ ಗಣ್ಯರ ಸಮ್ಮುಖದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳುವಾಸೆ ನನ್ನದು ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಾ.ನಾಗವೇಣಿ, ಗಣರಾಜ್ಯೋತ್ಸವದಲ್ಲಿ ಬಾಬಾ ಸಾಹೇಬರ ಭಾವಚಿತ್ರ ಕಡ್ಡಾಯದ ಆದೇಶವಿದೆ.ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಡಿ ನ್ಯಾಯ ಒದಗಿಸುವ ಶ್ರೇಷ್ಠ ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಎತ್ತಿಹಿಡಿಯಬೇಕು ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಎಸ್.ಕೆ. ಮಂಜುನಾಥ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತ ಶಿವಣ್ಣ, ತಾಪಂ ಸದಸ್ಯ ಬಸವರಾಜ್ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ತಾ.ಪಂ ಸದಸ್ಯ ಸಿದ್ದೇಶ್, ವಕೀಲ ಬಸವರಾಜ್, ಶಂಕರ ನಾಯ್ಕ ತಿಮ್ಮೇಶ್, ಪ.ಪಂ ಸದಸ್ಯರಾದ ಲುಕ್ಮಾನ್ ಖಾನ್, ಶಕೀಲ್ ಅಹಮ್ಮದ್, ಮಂಜಮ್ಮ, ವಿಶಾಲಾಕ್ಷಿ, ಜಿ., ಮಂಜುನಾಥ್, ಎನ್. ನವೀನ್ ಕುಮಾರ್, ದೇವರಾಜ್, ವಕೀಲರ ಸಂಘದ ಅಧ್ಯಕ್ಷ ಬಸವರಾಜ್, ಕ.ಸಾ.ಪ. ಅಧ್ಯಕ್ಷ ಹಜರತ್ ಅಲಿ, ಪ.ಪಂ ನಾಮನಿರ್ದೇಶನ ಸದಸ್ಯ ಬಿ.ಪಿ.ಸುಭಾನ್, ಈಶ್ವರಿ ವಿದ್ಯಾಲಯದ ಅಕ್ಕ ಭಾರತಿ, ತಾ.ಪಂ ಇಓ ಮಲ್ಲಾನಾಯ್ಕ, ಸಿಪಿಐ ಡಿ.ದುರುಗಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.