ಪ್ರಚಲಿತ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಕವಿತೆಗಳು ಅಗತ್ಯ

ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಆಶಯ

ದಾವಣಗೆರೆ, ಜ.24- ಕವಿತೆಗಳನ್ನು ರಚಿ ಸುವಾಗ ಪ್ರಚಲಿತ ಸಮಸ್ಯೆಗಳನ್ನು ಪ್ರತಿಬಿಂಬಿ ಸುವ ಹಾಗೂ ಸರ್ವಕಾಲಕ್ಕೂ ಸತ್ಯವಿರಬಹು ದಾದ ಕವಿತೆಗಳು ಯಾವಾಗಲೂ ಜೀವಂತವಾಗಿರಲು ಸಾಧ್ಯ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಅಭಿಪ್ರಾಯಪಟ್ಟರು.

ನಗರದ ರೋಟರಿ ಬಾಲಭವನದಲ್ಲಿ ಶ್ರೀಮತಿ ವೀಣಾ ಯೋಗೇಂದ್ರನಾಯ್ಕ ಅವರ ಮಗನ ನಾಮಕರಣದ ಅಂಗವಾಗಿ ಕಳೆದ ವಾರ ಏರ್ಪಾಡಾಗಿದ್ದ ರಾಜ್ಯ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕವಿತೆಗಳನ್ನು ರಚಿಸುವಾಗ ಕುವೆಂಪು ರವರ ನಾಡಗೀತೆಯಂತಹ, ದ.ರಾ. ಬೇಂದ್ರೆ ಯವರ ನಾಕು ತಂತಿಯಂತಹ, ರವೀಂದ್ರನಾಥ ಟ್ಯಾಗೂರ್‌ರವರ ರಾಷ್ಟ್ರಗೀತೆಯಂತಹ ಇನ್ನೂ ಅನೇಕ ಕವಿಗಳ ಕವಿತೆಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಿ ಕವಿತೆಗಳನ್ನು ರಚಿಸಲು ಪ್ರಯತ್ನಿಸಬೇಕು ಎಂದು ಅವರು ಯುವ ಪ್ರತಿಭೆಗಳಿಗೆ ಮನೋಜ್ಞವಾಗಿ ವಿವರಿಸಿದರು.

ಕವಿಗೋಷ್ಠಿಯನ್ನು ಉದ್ಘಾಟಿಸಿದ ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಚಾ ರ್ಯರು ಹಾಗೂ ಉಪನಿರ್ದೇಶಕ (ಅಭಿ ವೃದ್ಧಿ) ಹೆಚ್‌.ಕೆ. ಲಿಂಗರಾಜು ಮಾತನಾಡಿ, ಕವಿಗೋಷ್ಠಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಸಾಹಿತಿಗಳಾದ ಡಾ. ಆನಂದ ಋಗ್ವೇದಿ, ಸಂತೇಬೆನ್ನೂರು ಫೈಜ್ನಟ್ರಾಜ್, ಮಾಲತೇಶ್‌ ನಿಟ್ಟೂರು, ಶ್ರೀಮತಿ ಮಲ್ಲಮ್ಮ ನಾಗರಾಜ, ಶಿಕ್ಷಕರಾದ ಟಿ.ಎಂ. ಪತ್ರೇಶ್‌, ಶ್ರೀಮತಿ ವೀಣಾ ಮಾಂತೇಶ್, ಆನಂದಕುಮಾರ್‌, ಕಲಿವೀರ ಕಳ್ಳಿಮನಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗಂಗಾಧರ ಬಿ.ಎಲ್‌. ನಿಟ್ಟೂರು ಅವರು ತಮ್ಮ ಆಶಯ ನುಡಿಗಳನ್ನಾಡಿದರು.ಸೈಫುಲ್ಲಾ ಸಂತೇಬೆನ್ನೂರು ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಶಾಂತ ಎಂ.ಎಸ್‌ ಸ್ವಾಗತಿಸಿದರು. ಕು. ರೇಷ್ಮಾ ಬಿ.ಕೆ. ವಂದಿಸಿದರು. ಶ್ರೀಮತಿ ಸಂಧ್ಯಾ ಸುರೇಶ್‌ ನಿರೂಪಿಸಿದರು.

error: Content is protected !!