ಗ್ರಾಮ ಪಂಚಾಯ್ತಿ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲು ಕರೆ

ಹರಪನಹಳ್ಳಿ, ಜ.24 – ಕಾಂಗ್ರೆಸ್ ಭದ್ರ ಕೋಟೆಯಂತಿರುವ ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ 8 ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗೆ ನೂತನ ಗ್ರಾಮ ಪಂಚಾಯಿತಿ ಸದಸ್ಯರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಚಿದಾನಂದಪ್ಪ ಅವರು ನೂತನ ಗ್ರಾ.ಪಂ ಸದಸ್ಯರಿಗೆ ಸಲಹೆ ನೀಡಿದರು.

ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಮಜ್ಜಿಗೇರಿಯ ಸುಗಂಧಮ್ಮ ರೇವಣಸಿದ್ದಪ್ಪನವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.

ಹಿರಿಯರ ಜೊತೆ ಚರ್ಚಿಸಿ, ಬಡವರನ್ನು ಗುರುತಿಸಿ ಜನತಾ ಮನೆಗಳನ್ನು ವಿತರಣೆ ಮಾಡಿ ಅಭಿವೃದ್ದಿಗೆ ಹೆಚ್ಚು ಒತ್ತು ಕೊಟ್ಟು ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಯನ್ನು ಮಾದರಿ ಗ್ರಾಮ ಪಂಚಾಯ್ತಿಯನ್ನಾಗಿ ಮಾಡಬೇಕು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ ಮಾತನಾಡಿ, ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಅಭೂತ ಪೂರ್ವ ಗೆಲುವು ಸಿಕ್ಕಿದೆ. ಬಿಜೆಪಿ ಸಿದ್ದಾಂತವೇ ಬೇರೆ, ಕಾಂಗ್ರೆಸ್ ಸಿದ್ದಾಂತವೇ ಬೇರೆ. ಆದ್ದರಿಂದ ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬಂದಿರುವುದು ಸಂತಸ, ನಿಷ್ಠರಾಗಿ ಇದ್ದು ಉತ್ತಮ ಕೆಲಸ ಮಾಡಿ ಎಂದು ಹೇಳಿದರು.

 ತಾಲ್ಲೂಕು ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಬಿ.ವಾಗೀಶ್ ಮಾತನಾಡಿ, ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಕಾಂಗ್ರೆಸ್ – ಜೆಡಿಎಸ್  ಹೊಂದಾಣಿಕೆಯಿಂದ ಚುನಾವಣೆ ಎದುರಿಸಿವೆ. ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ ಒಗ್ಗಟ್ಟಿನಿಂದ ಅಧಿಕಾರ ನಡೆಸಿ ಎಂದು ಸಲಹೆ ನೀಡಿದರು. 

ನೂತನ ಗ್ರಾಮ ಪಂಚಾಯಿತಿ ಸದಸ್ಯ ಇಟ್ಟಿಗುಡಿ ತಿಮ್ಮೇಶ, ಮುಖಂಡರಾದ ಕಲ್ಲಹಳ್ಳಿ ಈರಣ್ಣ, ಇಟ್ಟಿಗುಡಿ ಟಿ.ಅಂಜಿನಪ್ಪ, ಮಜ್ಜಿಗೇರಿ ಬಸವರಾಜಪ್ಪ, ಕಲ್ಲಹಳ್ಳಿ ಗೋಣೆಪ್ಪ, ತಿರುಕಪ್ಪ, ಮಡಿವಾಳರ ಬಸವರಾಜಪ್ಪ, ಪ್ರಕಾಶ, ಪರಸಪ್ಪ ಸೇರಿದಂತೆ ಇತರರು ಇದ್ದರು.

error: Content is protected !!