ಮಲೇಬೇನ್ನೂರು, ಜ.21- ಇಲ್ಲಿನ ಪುರಸಭೆ ಮತ್ತು ನಾಡ ಕಛೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಯಿತು.
ಪುರಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗಾಮತ ಸಮಾಜದ ಹಿರಿಯರಾದ ಮಾಗಾನಹಳ್ಳಿ ಹಾಲಪ್ಪ ಮಾತನಾಡಿ, 12ನೇ ಶತಮಾನದಲ್ಲಿ ನಾಡು ಕಂಡ ದಾರ್ಶನಿಕರಲ್ಲಿ ಅಂಬಿಗರ ಚೌಡಯ್ಯನವರೂ ಒಬ್ಬರಾ ಗಿದ್ದು, ಅವರ ತಮ್ಮ ನಡವಳಿಕೆಗಳಿಂದಾಗಿಯೇ ನಿಜಶರಣ ಎಂಬ ಹೆಸರು ಪಡೆದಿದ್ದರು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಆದಾಪುರ ವಿಜಯಕುಮಾರ್ ಮಾತನಾಡಿ, ಇಂದಿನ ಯುವ ಪೀಳಿಗೆಗೆ ದಾರ್ಶನಿಕರ ಪರಿಚಯ ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದ್ದು, ಜಯಂತಿ ಆಚರಣೆ ಜೊತೆಗೆ ದಾರ್ಶನಿಕರ ಪುಸ್ತಕಗಳನ್ನು ಮಕ್ಕಳಿಗೆ ಕೊಟ್ಟು ಓದಿಸಬೇಕೆಂದರು.
ಪುರಸಭೆ ಸದಸ್ಯ ಬಿ. ಸುರೇಶ್, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಗಂಗಾಮತ ಸಮಾಜದ ಮುಖಂಡರಾದ ಗೌಡ್ರ ಮಂಜುನಾಥ್, ಕಣ್ಣಾಳ್ ಧರ್ಮಣ್ಣ, ಎಂ.ಎನ್. ಮಂಜುನಾಥ್, ಆರ್.ಹೆಚ್. ಬಸವರಾಜ್ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಶ್ರೀಮತಿ ನಾಹೀದಾ ಅಂಜುಂ ಸೈಯದ್ ಇಸ್ರಾರ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಧರಣೀಂದ್ರಕುಮಾರ್ ಉಪ ತಹಶೀ ಲ್ದಾರ್ ಆರ್. ರವಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್ ಸ್ವಾಮಿ, ಪುರಸಭೆ ಸದಸ್ಯರಾದ ಸುಬ್ಬಿರಾ ಜಪ್ಪ, ಎ.ಆರೀಫ್ ಅಲಿ, ಯೂಸೂಫ್, ಮಾಸಣಗಿ ಶೇಖ ರಪ್ಪ, ಮಹಾಲಿಂಗಪ್ಪ, ಎಂ.ಬಿ. ಫೈಜು, ಭೋವಿಕುಮಾರ್, ಫಕೃದ್ಧೀನ್ ಅಹಮದ್, ಪ್ರಕಾಶ್‌ಚಾರ್, ಪಟ್ಟಣದ ತಳಸದ ಬಸವರಾಜ್, ಬೆಣ್ಣೆಹಳ್ಳಿ ಬಸವರಾಜ್, ಬಿ. ಚಂದ್ರಪ್ಪ, ಪೂಜಾರ್ ಗಂಗಾಧರ್, ಎ.ಕೆ. ಸುರೇಶ್, ಗಂಗಾಮತ ಸಮಾಜದ ಬಾರ್ಕಿ ಬಸವರಾಜ್, ಜಿ. ಗದಿಗೆಪ್ಪ, ನಿಟ್ಟೂರ ರಾಮಚಂದ್ರಪ್ಪ, ಹಳೇಮನಿ ಕುಮಾರ್, ಕರಡಿ ಸೋಮಶೇಖರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್ ಮತ್ತಿತರರು ಭಾಗವಹಿಸಿದ್ದರು.