ಜಗಳೂರು ಪೂರ್ವಭಾವಿ ಜನಜಾಗೃತಿ ಸಭೆಯಲ್ಲಿ ಪ್ರಸನ್ನಾನಂದಪುರಿ ಶ್ರೀ ಕರೆ
ಜಗಳೂರು, ಜ.18- ವಾಲ್ಮೀಕಿ ಸಮುದಾಯದ ಸಂಘಟನೆ ಮತ್ತು ಜನಜಾಗೃತಿಗಾಗಿ ಫೆ.8 ಮತ್ತು 9 ರಂದು ರಾಜನಹಳ್ಳಿಯಲ್ಲಿ 3ನೇ ವರ್ಷದ ವೈಚಾರಿಕ ವಾಲ್ಮೀಕಿ ಜಾತ್ರೆ ನಡೆಯಲಿದ್ದು, ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ರಾಜನಹಳ್ಳಿ ಶ್ರೀ ವಾಲ್ಮೀಕಿ ಪೀಠದ ಪ್ರಸನ್ನಾನಂದ ಮಹಾಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಜನಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಸಹೋದರ ಸಮಾಜದ ಮಠಮಾನ್ಯಗಳಂತೆ ವಾಲ್ಮೀಕಿ ಪೀಠದಿಂದ ವಾಲ್ಮೀಕಿ ಜಾತ್ರೆ ಹೆಸರಿನಡಿ ಸಮುದಾಯವನ್ನು ಜಾಗೃತಗೊಳಿಸಿ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿಪಡಿಸಿ ಸಮಾಜ ವನ್ನು ಮುಖ್ಯ ವಾಹಿನಿಗೆ ತರಬೇಕಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಹೊರತುಪಡಿಸಿ 28 ಜಿಲ್ಲೆಗಳನ್ನೊಳಗೊಂಡಂತೆ ರಾಜ್ಯದಲ್ಲಿ 4ನೇ ದೊಡ್ಡ ಮತ್ತು ಐತಿಹಾಸಿಕ ಪರಂ ಪರೆ ಹೊಂದಿದ ನಾಯಕ ಸಮುದಾಯ ಕ್ಕೆ ಎಲ್ಲಾ ಪಕ್ಷದವರು ಚುನಾವಣೆ ವೇಳೆ ಭರವಸೆ, ಆಮಿಷವೊಡ್ಡಿ ಮತ ಪಡೆಯುತ್ತಾರೆ. ಅಧಿಕಾರಕ್ಕೆ ಬಂದ ನಂತರ ತಾತ್ಸಾರ ಧೋರಣೆ ಅನುಸರಿ ಸುತ್ತಾರೆ. ಈ ಹಿನ್ನೆಲೆಯಲ್ಲಿ ಆಡಳಿತ ಸರ್ಕಾರಗಳ ವಿರುದ್ದ ಸ್ವಾಭಿಮಾನಿ ಗಳಾಗಿ ಸಂಘಟಿ ತರಾಗುವುದು ಅನಿವಾರ್ಯವಾಗಿದೆ ಎಂದರು.
ಶೇ. 7.5ರಷ್ಟು ಮೀಸಲಾತಿ ನಮ್ಮ ಆಗ್ರಹವಾಗಿದೆ. ಸರಕಾರ ಶೀಘ್ರದಲ್ಲಿ ಯೇ ತೀರ್ಮಾನ ಕೈಗೂಳ್ಳುವ ವಿಶ್ವಾಸವಿದೆ ಎಂದು ಶ್ರೀಗಳು ಆಶಯ ವ್ಯಕ್ತ ಪಡಿಸಿದರು.
ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ: ಸರ್ಕಾರದಿಂದ ಎಸ್ಟಿ ನಿಗಮದಡಿ ದೊರೆಯುವ ಗಂಗಾಲ್ಯಾಣ ಸೇರಿದಂತೆ ಇತರೆ ಸೌಲಭ್ಯಗಳನ್ನು ಸಮುದಾಯದ ಅರ್ಹ ಬಡ ಫಲಾನುಭವಿಗಳಿಗೆ ಪಕ್ಷಾತೀತವಾಗಿ ಕಲ್ಪಿಸಿಕೊಡಬೇಕು. ಸಮುದಾಯದ ಬಡ ಜನರು ಆರ್ಥಿಕ ಆಭಿವೃದ್ಧಿ ಹೊಂದಲು ಕೈ ಜೋಡಿಸಿ ಎಂದು ಶ್ರೀ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ ಶ್ರೀಗಳು ಸಲಹೆ ನೀಡಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ವಾಲ್ಮೀಕಿ ಜನಾಂಗದ ಪ್ರತಿನಿಧಿಯಾಗಿರುವ ನಾನು ಸದಾ ಜನಾಂಗದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಶೇ. 7.5 ಮೀಸಲಾತಿ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮೀಸಲಾತಿಗಾಗಿ ನಮ್ಮ ಶ್ರೀಗಳು ಕೈಗೂಂಡ ಪಾದಯಾತ್ರೆ ಸರಕಾರದ ಗಮನ ಸೆಳೆದಿದೆ.ಮೀಸಲಾತಿಗಾಗಿ ಸಮಾಜದ 17 ಜನ ಶಾಸಕರು, ಶ್ರೀಗಳು ತಿಳಿಸಿದರೆ ರಾಜೀನಾಮೆ ನೀಡಲೂ ಸಿದ್ದರಾಗಿದ್ದೇವೆ ಎಂದರು.
ಇದೇ ವೇಳೆ ಜಿ.ಪಂ ಕ್ಷೇತ್ರಕ್ಕೆ ತಲಾ ಒಬ್ಬರಂತೆ ಅಣಬೂರು ವಕೀಲ ಜಿ.ಎಸ್.ಲಕ್ಷ್ಮಣ, ದೊಣ್ಣೆಹಳ್ಳಿ ಬಿ. ರವಿಕುಮಾರ್, ಬಿಳಿಚೋಡು ಮಹೇಶ್, ಸೊಕ್ಕೆ ಆನಂದಪ್ಪ ಹಾಗೂ ಪಟ್ಟಣಕ್ಕೆ ಲೋಕೇಶ್, ಮಹಿಳಾ ಪ್ರತಿನಿಧಿಯಾಗಿ ಜಿ.ಪಂ. ಸದಸ್ಯೆ ಸವಿತಾ ಅವರನ್ನು ವಾಲ್ಮೀಕಿ ಸೇವಾ ಸಮಿತಿಗೆ 5 ಜನರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಸವಿತಾ ಕಲ್ಲೇಶ್, ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ನಾಯಕ ಸಮಾಜದ ಕಾರ್ಯದರ್ಶಿ ಸೂರಲಿಂಗಪ್ಪ, ಮುಖಂಡರಾದ ವೀರೇಂದ್ರ ಸಿಂಹ ,ಪಿ.ಎಚ್.ಓ ಬಣ್ಣ, ಬಿ.ದೇವೇಂದ್ರಪ್ಪ, ನಿವೃತ್ತ ಶಿಕ್ಷಕ ಪಾಲಯ್ಯ, ಬಿಸ್ತುವಳ್ಳಿ ಬಾಬು, ಲೋಕೇಶ್, ಪ್ರಭು , ಮಾಗಡಿ ಮಂಜಣ್ಣ, ಕೃಷ್ಣಮೂರ್ತಿ, ಶ್ರೀನಿವಾಸ್, ಓಬಳೇಶ್ ಬಿದರಕೆರೆ ರವಿಕುಮಾರ್, ನಿಜಲಿಂಗಪ್ಪ, ಶಿವಣ್ಣ, ನಾಗರಾಜ್, ಶಿವಣ್ಣ ಮುಂತಾದವರು ಭಾಗವಹಿಸಿದ್ದರು.