ಲಾಭದಾಯಕದಲ್ಲಿ ಮುನ್ನಡೆದಿರುವ ಕವಿರತ್ನ ಕಾಳಿದಾಸ ಕ್ರೆಡಿಟ್ ಸೊಸೈಟಿ

22ನೇ ವರ್ಷದ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ. ವಿಜಯಕುಮಾರ್ ಹರ್ಷ

ದಾವಣಗೆರೆ,ಜ.15- ಲಾಭದಾಯಕದಲ್ಲಿ ಮುನ್ನಡೆದಿರುವ ನಗರದ ಕವಿರತ್ನ ಕಾಳಿದಾಸ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಅಭಿವೃದ್ಧಿಯನ್ನು ಕಾಯ್ದುಕೊಂಡು ಹೋಗುತ್ತಿರುವ ಕ್ರೆಡಿಟ್ ಸೊಸೈಟಿಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಘದ ಅಧ್ಯಕ್ಷ ಬಿ. ವಿಜಯಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಡಿ. ದೇವರಾಜ ಅರಸು ಬಡಾವಣೆಯಲ್ಲಿರುವ ಇ.ಡಬ್ಲ್ಯೂ ಎಸ್ ಕಾಲೋನಿಯ ದಾನ ರತ್ನಾಕರ ಚಿರಡೋಣಿ ಶ್ರೀಮತಿ ಕಾವೇರಮ್ಮ ಶ್ರೀ ಸತ್ಯನಾರಾಯಣ ಶ್ರೇಷ್ಠಿ ಸಭಾ ಭವನದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಕವಿರತ್ನ ಕಾಳಿದಾಸ ಕ್ರೆಡಿಟ್ ಸೊಸೈಟಿಯ 22ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು ಸ್ವಂತ ಕಟ್ಟಡ ಹೊಂದಿರುವ ಸೊಸೈಟಿ ಎಂಬ ಕೀರ್ತಿ ಪಡೆದಿದೆ. 2020, ಮಾರ್ಚ್ ಅಂತ್ಯಕ್ಕೆ 1.88 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. 27 ಲಕ್ಷ ರೂ. ಷೇರು ಬಂಡವಾಳ, 18.50 ಲಕ್ಷ ರೂ. ಕಾಯ್ದಿಟ್ಟ ನಿಧಿ ಮತ್ತು 22 ಲಕ್ಷ ರೂ. ಇತರೆ ನಿಧಿಗಳಾಗಿದ್ದು, 2.69 ಕೋಟಿ ರೂ. ದುಡಿಯುವ ಬಂಡವಾಳವಾಗಿರುತ್ತದೆ. 

39 ಲಕ್ಷ ರೂ.ಗಳನ್ನು ಹೂಡಿಕೆ ಮಾಡಲಾಗಿದ್ದು, ಸಂಘದ ಸದಸ್ಯರ ಅಗತ್ಯಗನುಗುಣವಾಗಿ 1.39 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ. 1.88 ಲಕ್ಷ ರೂ. ಲಾಭ ಗಳಿಸಿದೆ ಎಂದು ಅವರು ಸಂಘದ ಪ್ರಗತಿಯನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದರು.

ಪ್ರಾಸ್ತಾವಿಕ ನುಡಿಯೊಂದಿಗೆ ವಂದನಾರ್ಪಣೆ ಮಾಡಿದ ಸಂಘದ ಹಿರಿಯ ನಿರ್ದೇಶಕ ಕೆ. ಹೇಮಂತಕುಮಾರ್, ಕವಿರತ್ನ ಕಾಳಿದಾಸ ಕ್ರೆಡಿಟ್ ಸೊಸೈಟಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಪರಿಶ್ರಮ, ಗ್ರಾಹಕರ – ಸದಸ್ಯರ ನಂಬಿಕೆ – ವಿಶ್ವಾಸ, ಸಿಬ್ಬಂದಿ ವರ್ಗದವರ ಕರ್ತವ್ಯ ನಿಷ್ಠೆ ಕಾರಣವಾಗಿದೆ ಎಂದು ಎಲ್ಲರ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಸಂಘದ ಉಪಾಧ್ಯಕ್ಷ ಟಿ.ಹೆಚ್. ನಿರಂಜನಬಾಬು, ನಿರ್ದೇಶಕರುಗಳಾದ ಕೆ.ಜಿ. ಪ್ರಕಾಶ್, ಶ್ರೀಮತಿ ಇ.ವೈ. ಜೀವಿಕಾ, ಶ್ರೀಮತಿ ಶಾಂತಮ್ಮ ಟಿ. ಸವದತ್ತಿ, ಶಿವಣ್ಣ ಇಟಗಿ, ಎ.ಡಿ. ಭೀಮಪ್ಪ, ಕೆ.ಜಿ. ಜಯರಾಮ್, ಷಣ್ಮುಖಪ್ಪ, ಇ.ವೈ. ಲೋಹಿತ್, ವಿಶೇಷ ಆಹ್ವಾನಿತರಾದ ಸಿ.ಬಿ.ಆನಂದ್, ಜಿ.ಆರ್. ಮಾಲತೇಶ್ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಶ್ರೀಮತಿ ಕೆ.ಲಕ್ಷ್ಮಿ ರಾಜಗೋಪಾಲ್ ಅವರ ಪ್ರಾರ್ಥನೆಯ ನಂತರ ನಿರ್ದೇಶಕ ಎಸ್.ಎಂ. ಹಿರೇಮಠ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ರಮೇಶ್ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಸಿಬ್ಬಂದಿಗಳಾದ ಶ್ರೀಮತಿ ಪಿ.ಮಂಜುಳಾ, ಮನಿಷ್ ಎಂ. ಘಾಟ್ಗೆ, ಜೆ.ಸಿ. ರಮೇಶ್, ಟಿ. ಶಿವಕುಮಾರ್, ವರುಣ್ ಕುಮಾರ್ ಕಂಬಳಿ ಅವರುಗಳು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.

error: Content is protected !!