ಯುವ ಸಮೂಹ ಟಿ.ವಿ. ಮೊಬೈಲ್‍ ದಾಸ್ಯದಿಂದ ಹೊರ ಬರಬೇಕು

ಹರಪನಹಳ್ಳಿ : ಸಂಕ್ರಾಂತಿ ಕಾರ್ಯಕ್ರಮದಲ್ಲಿ ಎಂ.ಪಿ.ಲತಾ ಮಲ್ಲಿಕಾರ್ಜುನ ಕರೆ

ಹರಪನಹಳ್ಳಿ, ಜ.14- ಯುವ ಸಮೂಹ ಟಿ.ವಿ. ಮೊಬೈಲ್‍ಗಳ ದಾಸ್ಯ ದಿಂದ ಹೊರಗೆ ಬರಬೇಕಾಗಿದೆ. ಸುಸಂಸ್ಕೃತ ಭಾಷೆಯ ಪ್ರಯೋಗ ತಾಲ್ಲೂಕಿ ನಲ್ಲಿ ಅವಶ್ಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ತಾಲ್ಲೂಕಿನ ಕಡತಿ ಹಾಗೂ ನಂದ್ಯಾಲ ಬಳಿ ಇರುವ ತುಂಗಭದ್ರಾ ನದಿ ದಡದಲ್ಲಿ 3ನೇ ವರ್ಷದ ಮಕರ ಸಂಕ್ರಾತಿ ಹಬ್ಬವನ್ನು ಎಳ್ಳು, ಬೆಲ್ಲ ಸೇರಿ ಸಾಮೂಹಿಕ ರೊಟ್ಟಿ ಊಟದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಪ್ರಮುಖವಾಗಿ ಸಂಕ್ರಾಂತಿ ಹಬ್ಬ ಚಳಿಗಾಲ ಮುಗಿಸಿ ಬೇಸಿಗೆ ಕಾಲಕ್ಕೆ ಪಾರ್ದಾಪಣೆ ಮಾಡುವ ಕಾಲ. ಈ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚಿ ಆಚರಣೆ ಮಾಡುವುದರಲ್ಲಿ ವೈಜ್ಞಾನಿಕ ಮಹತ್ವ ವಿದೆ. ಹಿರಿಯ ಸಂಪ್ರದಾಯಗಳನ್ನು ಉಳಿಸಿ, ಬೆಳೆಸಲು ಇಂತಹ ಹಬ್ಬ ಹರಿ-ದಿನಗಳನ್ನು ಸಾಮೂಹಿಕವಾಗಿ ಆಚರಣೆ ಮಾಡೋಣ. ಜಾತಿ ಮತಗಳ ಬೇಧವಿಲ್ಲದೇ ಒಟ್ಟಾಗಿ ಊಟ ಸವಿಯುವ ಮೂಲಕ ಸಾಮರಸ್ಯ ಬೆಸೆಯುವುದೇ ಇದರ ಉದ್ದೇಶ ಎಂದರು.

ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಮಾಗಾನಹಳ್ಳಿ ಉದಯಶಂಕರ್  ತಾಲ್ಲೂಕು ಪಂಚಾಯ್ತಿ ಸದಸ್ಯ ಗೌಡ್ರ ಮಂಜುಳಾ ಜಗದೀಶ್, ಹಲುವಾಗಲು ಗ್ರಾಮ ಪಂಚಾಯ್ತಿ ಮಾಜಿ  ಅಧ್ಯಕ್ಷರಾದ ರತ್ನಮ್ಮ ಸೋಮಪ್ಪ,  ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್. ರಾಜಪ್ಪ, ಪುರಸಭೆ ಸದಸ್ಯರುಗಳಾದ ಎಂ.ವಿ. ಅಂಜಿನಪ್ಪ,  ಗೊಂಗಡಿ  ನಾಗ ರಾಜ,  ಉದ್ದಾರ ಗಣೇಶ, ಮುಖಂಡ ರಾದ ಬಿ.ಕೆ.ಪ್ರಕಾಶ, ಮಲ್ಲಿಕಾರ್ಜುನ, ಮೈದೂರು ರಾಮಣ್ಣ,  ಇಜಾರಿ ಮಹಾವೀರ, ಇಟ್ಟಿಗುಡಿ ಚನ್ನಬಸಪ್ಪ, ಹಲವಾಗಲು ಕರಿಯಪ್ಪ, ಕಂಚಿಕೇರಿ ಜಯಲಕ್ಷ್ಮಿ, ಜಗದೀಶಗೌಡ್ರು, ಚಿಕ್ಕೇರಿ ಬಸಪ್ಪ,  ಕುಂಚೂರು ಇಬ್ರಾಹಿಂ, ಸಾಸ್ವಿ ಹಳ್ಳಿ ನಾಗರಾಜ, ಎಚ್. ವಸಂತಪ್ಪ,  ಹುಲಿ ರಮೇಶ, ಶೃಂಗಾರ ತೋಟದ ಅಶೋಕ,   ಉಮಾಶಂಕರ, ಕವಿತಾ ಸುರೇಶ,  ಎನ್.ಟಿ. ಸೋಮಣ್ಣ, ಹಲು ವಾಗಲು, ನಾರಾಯಣ, ಮತ್ತೂರು ಬಸ ವರಾಜ, ವೃಷಭೇಂದ್ರ ಇನ್ನಿತರರಿದ್ದರು.

error: Content is protected !!