ಹರಿಹರ, ಜ.12 – ಸಮಾಜದಲ್ಲಿ ಶಾಂತಿ ನೆಲೆಸಲು ಪ್ರತಿಯೊಬ್ಬರೂ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ನೂತನ ವೃತ್ತ ನಿರೀಕ್ಷಕ ಯು. ಸತೀಶ್ ಕುಮಾರ್ ಹೇಳಿದರು.
ಹರಿಹರ ತಾಲ್ಲೂಕಿಗೆ ವೃತ್ತ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ಇಸ್ಪೀಟ್, ಜೂಜಾಟ, ಮಟ್ಕಾ, ಕಳ್ಳತನ, ದೊಂಬಿ, ಗಲಾಟೆ, ಸಮಾಜ ಘಾತುಕ ಪ್ರಕರಣಗಳನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.
ಚನ್ನಗಿರಿ, ಹಿರಿಯೂರು ಗ್ರಾಮಾಂತರ,ಇತರೆ ಗ್ರಾಮಗಳಲ್ಲಿ ಪಿಎಸ್ಸೈ ಯಾಗಿ ಕರ್ತವ್ಯಗಳನ್ನು ನಿರ್ವಹಿಸಿ, ದಾವಣಗೆರೆ ಡಿಎಸ್‌ಪಿ ವಿಭಾಗದಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಅವರು ಹೇಳಿದರು.
ಈ ಹಿಂದೆ 1 ವರ್ಷಗಳ ಕಾಲ ಹರಿಹರದಲ್ಲಿ ವೃತ್ತ ನಿರೀಕ್ಷಕರಾಗಿ ಎಂ. ಶಿವಪ್ರಸಾದ್ ಅವರು ಸೇವೆ ಸಲ್ಲಿಸಿ ದಾವಣಗೆರೆಗೆ ವರ್ಗಾವಣೆಯಾಗಿದ್ದಾರೆ.
ಮಲೇಬೆನ್ನೂರು ಪಿಎಸ್ ಐ ವೀರಬಸಪ್ಪ ಕುಸಲಾಪುರ, ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ ಐ ಡಿ. ರವಿಕುಮಾರ್, ನಗರ ಠಾಣೆ ಪಿಎಸ್ ಐ ಸುನಿಲ್ ಬಸವರಾಜ ತೇಲಿ ನೂತನ ವೃತ್ತ ನಿರೀಕ್ಷಕರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ಲಿಂಗರಾಜ್, ಕರಿಯಪ್ಪ, ಎಸ್. ಶಿವರಾಜ್, ಟಿ.ವಿ. ಸತೀಶ್, ಜೆ. ಶಿವಕುಮಾರ್, ಇಲಿಯಾಸ್ ಅಹ್ಮದ್, ನಾಗರಾಜ್, ಮುರಳೀಧರ ವಿ.ವಿ, ಸಿದ್ದಣ್ಣ, ನೇತ್ರಾವತಿ, ಸುಜಾತ ಹಾಗೂ ಇತರರು ಹಾಜರಿದ್ದರು.