ಉತ್ತರ ಪ್ರದೇಶದಲ್ಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ದಾವಣಗೆರೆ, ಜ.11- ಉತ್ತರ ಪ್ರದೇಶದ ಭೀಕರ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿಂದು ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು. 

ಅತ್ಯಾಚಾರಗಳು ನಿಲ್ಲಲೇಬೇಕು, ಮಾನವೀಯತೆ ನೆಲೆಗೊಳ್ಳಬೇಕು ಎಂಬ ಘೋಷವಾಕ್ಯಗಳನ್ನು ಮೊಳಗಿಸಿದ ಪ್ರತಿಭಟನಾಕಾರರು, ಭಾರತದಲ್ಲಿ ಸರಣಿ ರೂಪದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಬರ್ಬರ ಅತ್ಯಾಚಾರ, ಕೊಲೆಗೈದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ಬದೌನ್‍ನ ದೇವಾಲಯದಲ್ಲಿ ಅರ್ಚಕ ಮತ್ತಿತರರು ಸೇರಿ 50 ವರ್ಷದ ಮಹಿಳೆಯ ಮೇಲೆ ಭೀಕರವಾದ ಸಾಮೂಹಿಕ ಅತ್ಯಾಚಾರ ಎಸಗಿ ವಿಕೃತಿ ಮೆರೆದಿ ದ್ದಾರೆ. ಈ ಹಿಂದೆ ಉತ್ತರ ಪ್ರದೇಶದ ಉನ್ನಾಂ ವ್‍ನ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಕೋರ್ಟಿಗೆ ಬರುವ ಹಾದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಅದೇ ಆರೋಪಿ ಗಳಿಂದ ಸಾವಿಗೀಡಾದ ಘಟನೆ ನಡೆದಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ವಿಕೃತ ಲೈಂಗಿಕತೆಯನ್ನು ಬಿಂಬಿಸುತ್ತಾ ಹದಿವಯಸ್ಸಿನ ಗೊಂದಲದಲ್ಲಿರುವ ಮಕ್ಕಳನ್ನು ತಪ್ಪು ದಾರಿಗೆಳೆಯುವ ಜಾಲತಾಣ, ಸಿನಿಮಾ, ಜಾಹೀರಾತುಗಳನ್ನೂ ನಿರ್ಬಂಧಿಸಬೇಕು. ಸಂತ್ರಸ್ತರಿಗೆ ಎಲ್ಲ ಬಗೆಯ ನೆರವನ್ನೂ ಒಂದೇ ಛಾವಣಿಯಡಿ ಒದಗಿಸುವ ‘ಏಕ ಗವಾಕ್ಷಿ’ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲೂ ಆರಂಭಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯ ಸತೀಶ್ ಅರವಿಂದ್, ಪವಿತ್ರ, ಆದೀಲ್ ಖಾನ್, ಸಾಬೀರ್ ಅಲಿ, ಶಿವಕುಮಾರ್, ಮಕ್ಸೂದ್, ರವಿಕುಮಾರ್, ಮಹಮ್ಮದ್ ರಫೀಕ್, ಅಬ್ದುಲ್ ಸತ್ತಾರ್, ಮುಬಾರಕ್, ರಹಮತ್, ಅಣ್ಣಪ್ಪ, ಮನು, ಸುದೀಪ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!