ದಾವಣಗೆರೆ, ಜ.10- 12ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿದ್ದಂತಹ ಅಸ್ಪೃಶ್ಯತಾ ಮನೋಭಾವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಬಂದಿದ್ದು, ಇನ್ನು ಸಂಪೂರ್ಣವಾಗಿ ತೊಲಗಿಸುವಲ್ಲಿ ಅಹಿಂದ ಪ್ರಜಾ ಶಕ್ತಿಯಂತಹ ಸಂಘಟನೆಗಳು ಹಾಗೂ ಸಂಘಟನಾಕಾರರ ಪಾತ್ರ ಮುಖ್ಯವಾಗಿದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.
ನಗರದ 25ನೇ ವಾರ್ಡ್ ಡಿಸಿಎಂ ಟೌನ್ ಶಿಪ್ನ ಅಹಿಂದ ಪ್ರಜಾ ಶಕ್ತಿಯ ಶಾಖಾ ಘಟಕವನ್ನು ಶ್ರೀಗಳು ಇಂದು ಉದ್ಘಾಟಿಸಿದರು.
ಅಹಿಂದ ಪ್ರಜಾ ಶಕ್ತಿಯು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯಪ್ರವೃತ್ತವಾಗಿ ಇಡೀ ಕರ್ನಾಟಕದ ತುಂಬಾ ಹರಡಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ 25ನೇ ವಾರ್ಡ್ ನಗರಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಅಹಿಂದ ಪ್ರಜಾ ಶಕ್ತಿಯ ರಾಜ್ಯಾಧ್ಯಕ್ಷ ಜಿ.ಎಂ. ಗೋವಿಂದರಾಜು, ರಾಜ್ಯ ಉಪಾಧ್ಯಕ್ಷ ಎಸ್.ಎಸ್. ಗಿರೀಶ್, ರಾಜ್ಯ
ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪ್ರವೀಣ್ ಕುಮಾರ್, ರಾಜ್ಯ ಸಾಮಾಜಿಕ ಜಾಲತಾಣದ ಉಸ್ತುವಾರಿ ಮೊಹಮ್ಮದ್ ಜಿಕ್ರಿಯಾ, ಜಿಲ್ಲಾಧ್ಯಕ್ಷ ಜೆ.ಆರ್. ಮಾಲತೇಶ್, ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ ಆವರಗೆರೆ, ಅಹಿಂದ ಕುಮಾರ್, ಮಂಜುನಾಥ್, ಹಬೀಬ್ ಸೇರಿದಂತೆ ಅಹಿಂದ ಮುಖಂಡರು, ಕಾರ್ಯಕರ್ತರು ಇದ್ದರು.